March 5, 2026

ಮೂಡುಬಿದ್ರೆ: ಚಿನ್ನದ ಅಂಗಡಿಯಲ್ಲಿ ಕಳವಿಗೆ ಯತ್ನ: ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದ ವ್ಯಕ್ತಿ

0
image_editor_output_image700569673-1741127508424.jpg

ಮೂಡುಬಿದ್ರೆ: ಚಿನ್ನದ ಅಂಗಡಿಯೊಂದರಲ್ಲಿ ಕೈ ಚಳಕ ತೋರಿಸಲು ಹೋದ ವ್ಯಕ್ತಿಯೊಬ್ಬ ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದಿರುವ ಘಟನೆ ಮೂಡುಬಿದ್ರೆಯಲ್ಲಿ ನಡೆದಿದೆ.

ಮೂಡುಬಿದಿರೆಯ ಅಲಂಕಾರ್ ಎಂಬ ಚಿನ್ನದ ಅಂಗಡಿಗೆ ಗಿರಾಕಿಯಂತೆ ಬಂದು ಚಿನ್ನ ಎಗರಿಸುವಾಗ ಈತ ಸಿಕ್ಕಿಬಿದ್ದಿದ್ದಾನೆ.

ಜ್ಯುವೆಲ್ಲರಿ ಅಂಗಡಿಯಿಂದ ತಪ್ಪಿಸಿಕೊಂಡು ಓಡುವ ವೇಳೆ ಈತನನ್ನು ಸಾರ್ವಜನಿಕರು ಹಿಡಿದಿದ್ದು, ಒಂದೆರಡು ತದುಕಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈತ ಮೂಲತಃ ಬೆಳ್ತಂಗಡಿ ತಾಲೂಕಿನ ಗುರುವಾಯನಕರೆ ಗ್ರಾಮದನಾಗಿದ್ದಾನೆ.

Leave a Reply

Your email address will not be published. Required fields are marked *

error: Content is protected !!