ಉಳ್ಳಾಲ: ಅಂಗಡಿಯಿಂದ ನಗದು, ಸಾಮಗ್ರಿ ಕಳವು: ಕಳ್ಳತನದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ
ಉಳ್ಳಾಲ: ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ನರಿಂಗಾನ ಗ್ರಾಮದ ತೌಡುಗೋಳಿ ಜಂಕ್ಷನ್‌ನಲ್ಲಿರುವ ಅಂಗಡಿಯೊಂದರಲ್ಲಿ ನಗದು ಹಾಗೂ ಸಾಮಗ್ರಿಗಳನ್ನು ಕಳವು ಮಾಡಿದ ಘಟನೆ ಶುಕ್ರವಾರ ತಡರಾತ್ರಿ ನಡೆದಿದ್ದು, ಕಳ್ಳತನದ ಸಂಪೂರ್ಣ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ತೌಡುಗೋಳಿಯ ವಸಂತ ಅವರ ಮಾಲೀಕತ್ವದ ಅಂಗಡಿಗೆ ಕನ್ನ ಹಾಕಲು ಮುಂಜಾನೆ 2.30 ರ ಸುಮಾರಿಗೆ ರಾಡ್ ಸಮೇತ ಆಗಮಿಸಿದ್ದಾನೆ. ಬಳಿಕ ಕಳ್ಳನು ಹೊರಗಡೆಯ ಕಬ್ಬಿಣದ ಬಾಗಿಲಿಗೆ ಹಾಕಿದ್ದ ಬೀಗವನ್ನು ಮುರಿದು ಅಂಗಡಿ ಒಳಗೆ ಪ್ರವೇಶಿಸಿದ್ದಾನೆ.
ಬಳಿಕ ಅಲ್ಲಿಂದ ಕ್ಯಾಶ್ ಕೌಂಟರ್ ಇರುವ ಕೊಠಡಿಯ ಮರದ ಬಾಗಿಲಿನ ಬೀಗ ಮುರಿಯಲು ಸುಮಾರು ಅರ್ಧ ಗಂಟೆ ಒದ್ದಾಡಿದ್ದಾನೆ, ನಂತರ ಬಾಗಿಲ ಬೀಗ ಮುರಿದ ಆತ ಸುಮಾರು 10,000 ರೂ. ಮತ್ತು ಹಾಗೂ 15,000 ರೂ.ಮೊತ್ತದ ಸಾಮಗ್ರಿಗಳನ್ನು ಕದ್ದೊಯ್ದಿದ್ದಾನೆ.




