December 15, 2025

ಕಂಕನಾಡಿ ನಗರ ಠಾಣಾ ಪೊಲೀಸರಿಂದ ಅಂತರ್ ಜಿಲ್ಲಾ ದ್ವಿಚಕ್ರ ವಾಹನ ಕಳವು ಆರೋಪಿಯ ಬಂಧನ

0
IMG-20250301-WA0010.jpg

ಮಂಗಳೂರು: ಕಂಕನಾಡಿ ನಗರ ಠಾಣಾ ಪೊಲೀಸರಿಂದ ಅಂತರ್ ಜಿಲ್ಲಾ ದ್ವಿಚಕ್ರ ವಾಹನ ಕಳ್ಳನ ಬಂಧನವಾಗಿದೆ. ನಗರ ಪೊಲೀಸ್ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ 2-3 ವರ್ಷಗಳಿಂದ ಹಲವು ದ್ವಿಚಕ್ರ ವಾಹನಗಳು ಕಳ್ಳತನವಾಗಿ ಪ್ರಕರಣಗಳು ದಾಖಲಾಗಿದೆ.

ಕಂಕನಾಡಿ ನಗರ ಠಾಣಾ ಪ್ರಕರಣವೊಂದರಲ್ಲಿ ಪಿಎಸ್ಐ ಶಿವಕುಮಾರ ಕಾಂಬಳೆ ನೇತೃತ್ವದ ಅಪರಾಧ ವಿಭಾಗದ ಸಿಬ್ಬಂದಿಗಳ ತಂಡ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ,
• ಮಣಿಕಂಠ ಗೌಡ ಕೆ. (24) ತಂದೆ: ಕೆರೆಸ್ವಾಮಿ, ವಾಸ: ಹೆ ಪಿ ಪೆಟ್ರೋಲ್ ಪಂಪ್ ಹತ್ತಿರ, ಧರ್ಮಸ್ಥಳ ರಸ್ತೆ, ಮೂಡಬಿದ್ರೆ, ದಕ್ಷಿಣ ಕನ್ನಡ ಜಿಲ್ಲೆ, ಮೂಲ ವಿಳಾಸ: ಕಡಸೂರು ಗ್ರಾಮ, ಹೆಚ್ಚೆ ಅಂಚೆ, ಚಂದ್ರಗುತ್ತಿ ಹೋಬಳಿ, ಸೊರಬ ತಾಲೂಕು, ಶಿವಮೊಗ್ಗ ಜಿಲ್ಲೆ, ಎಂಬಾತನನ್ನು ಮೂಡಬಿದ್ರೆಯಲ್ಲಿ ದಸ್ತಗಿರಿ ಮಾಡಿ ಒಟ್ಟು 20 ದ್ವಿಚಕ್ರ ವಾಹನಗಳ ಕಳ್ಳತನ ಪ್ರಕರಣಗಳನ್ನು ಭೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

ಸದ್ರಿ ಆರೋಪಿ ಮಣಿಕಂಠ ಗೌಡನು ಮಂಗಳೂರು ನಗರ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಠಾಣೆಗಳ ವ್ಯಾಪ್ತಿಯಲ್ಲಿ ನಡೆಯುವ ಜಾತ್ರೆ, ಕಂಬಳೋತ್ಸವ, ಬಸ್ಸು ರೈಲ್ವೆ ನಿಲ್ದಾಣಗಳಲ್ಲಿ ನಿಲ್ಲಿಸಿ ಹೋಗಿರುವ ದ್ವಿಚಕ್ರ ವಾಹನಗಳ ಇಗ್ನಿ಼ಷನ್ ಸಾಕೆಟ್ ನ ಪ್ಲಗನ್ನು ಚಾಕಚಕ್ಯತೆಯಿಂದ ತಪ್ಪಿಸಿ, ಕ್ಷಣಾರ್ಧದಲ್ಲಿ ಕಳ್ಳತನ ಮಾಡಿಕೊಂಡು ಹೋಗುತ್ತಿದ್ದನು. ವಿಶೇಷವಾಗಿ ಹೀರೋ ಹೋಂಡಾ ಸ್ಪ್ಲೆಂಡರ್ ಗಳಿಗೆ ರೀಸೇಲ್ ವ್ಯಾಲ್ಯೂ ಇರುವುದರಿಂದ ಅವುಗಳನ್ನೇ ಕೇಂದ್ರೀಕರಿಸಿ ಕಳ್ಳತನ ಮಾಡುತ್ತಿದ್ದುದು ತನಿಖೆಯಲ್ಲಿ ತಿಳಿದುಬಂದಿರುತ್ತದೆ.

ಮಂಗಳೂರು ನಗರದ ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ ಅನುಪಮ್ ಅಗರ್ವಾಲ್ ಐಪಿಎಸ್ ನಿರ್ದೇಶನದಲ್ಲಿ, ಮಾನ್ಯ ಉಪ ಪೊಲೀಸ್ ಆಯುಕ್ತರು (ಕಾ.ಸು.) ರವರಾದ ಶ್ರೀ ಸಿದ್ದಾರ್ಥ ಗೋಯಲ್, ಐಪಿಎಸ್ ಹಾಗೂ ಉಪ ಪೊಲೀಸ್ ಆಯುಕ್ತರು (ಅಪರಾಧ ಮತ್ತು ಸಂಚಾರ) ರವರಾದ ಶ್ರೀ ರವಿಶಂಕರ್, ಕೆ.ಎಸ್.ಪಿ.ಎಸ್ ಮತ್ತು ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ಕಂಕನಾಡಿ ನಗರ ಪೊಲೀಸ್ ನಿರೀಕ್ಷಕರಾದ ಟಿ.ಡಿ. ನಾಗರಾಜ್ ರವರ ನೇತೃತ್ವದಲ್ಲಿ ಪಿಎಸ್ಐರವರಾದ ಶಿವಕುಮಾರ್ ಕಾಂಬಳೆ, ವಿನಾಯಕ ಭಾವಿಕಟ್ಟಿ, ಯೋಗಿಶ್ವರನ್, ಎಎಸ್ಐ ಅಶೋಕ್. ಕೆ. ಮತ್ತು ಕ್ರೈಂ ಸಿಬ್ಬಂದಿಗಳಾದ ಜಯಾನಂದ, ಸಂದೀಪ್, ಆಶಿತ್ ವಿಶಾಲ್ ಡಿ’ ಸೋಜಾ, ರಾಘವೇಂದ್ರ, ರಾಜೇಸಾಬ್ ಮುಲ್ಲಾ, ಗಂಗಾಧರ, ಚೇತನ್ ಹಾಗೂ ಕಂಪ್ಯೂಟರ್ ವಿಭಾಗದ ಮನೋಜ್ ರವರು ಆರೋಪಿಗಳ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.

ಆರೋಪಿತ ಮಣಿಕಂಠನು ಮೂಲತಃ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕುಡಸೂರು ನವನಾಗಿದ್ದು, ಕುಟುಂಬದೊಂದಿಗೆ ಮೂಡಬಿದ್ರೆಯಲ್ಲಿ ವಾಸ್ತವವ್ಯವಿದ್ದು, ಗ್ಯಾರೇಜಿನಲ್ಲಿ ಕೆಲಸ ಮಾಡಿಕೊಂಡಿದ್ದು, ದ್ವಿಚಕ್ರ ವಾಹನಗಳನ್ನು ಸುಲಭವಾಗಿ ಕಳ್ಳತನ ಮಾಡಿ ಅವುಗಳನ್ನು ಮಾರಾಟ ಮಾಡಲು ಈ ಕೆಳಗಿನ
• ಸತೀಶ್ ಬಂಗೇರ, ಪ್ರಾಯ: 32 ವರ್ಷ, ತಂದೆ: ಜಿನ್ನಪ್ಪ, ವಾಸ: ಡೋರ್ ನಂ 1-123 (ಎ), ಬೆಂಗಡಿ ದರ್ಕಸ್ ಗುಡ್ಡೆ ಹೌಸ್, ಈದು ಗ್ರಾಮ, ಹೊಸ್ಮಾರು ಅಂಚೆ, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ.

• ದೀಕ್ಷಿತ್, ಪ್ರಾಯ: 23 ವರ್ಷ ತಂದೆ: ಬಾಲಕೃಷ್ಣ, ವಾಸ: ಗುಡ್ಡಲಪಲ್ಕೆ ಹೌಸ್, ಪಣಪಿಲ ಗ್ರಾಮ, ವಲ್ಪಾಡಿ ಅಂಚೆ, ಮೂಡಬಿದ್ರೆ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ .

• ಸಂಗಣ್ಣ ಹೊನ್ನಾಳ್ಳಿ, ಪ್ರಾಯ: 30 ವರ್ಷ, ತಂದೆ: ದಿ|| ರುದ್ರಾಪ್ಪ ಹೊನ್ನಾಳ್ಳಿ, ವಾಸ: ಲಕ್ಕುಂಡಿ ಗ್ರಾಮ, ನವದಗಿ ಅಂಚೆ, ತಾಳಿಕೋಟೆ ತಾಲೂಕು, ವಿಜಯಪುರ ಜಿಲ್ಲೆ. ಹಾಲಿ ವಾಸ: ಕೊಡ್ಯಡ್ಕ, ಮೂಡಬಿದ್ರೆ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.

ವ್ಯಕ್ತಿಗಳಿಗೆ ನೀಡಿದ್ದು, ಇವರುಗಳನ್ನು ದಸ್ತಗಿರಿ ಮಾಡಿದ್ದು, ನಾಲ್ಕೂ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನದಲ್ಲಿರುತ್ತಾರೆ. ಮಂಗಳೂರು ನಗರದ ಬಂದರು, ಪಾಂಡೇಶ್ವರ, ಕಾವೂರು, ಬಜ್ಪೆ, ಮೂಲ್ಕಿ, ಉಳ್ಳಾಲ, ಕಂಕನಾಡಿ ನಗರ ಪೊಲೀಸ್ ಠಾಣೆಗಳ 15 ಪ್ರಕರಣಗಳು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ನಗರ, ಬಂಟ್ವಾಳ ಗ್ರಾಮಾಂತರ ಮತ್ತು ಉಪ್ಪಿನಂಗಡಿಯ 05 ಪ್ರಕರಣಗಳು ಸೇರಿ ಒಟ್ಟು 20 ಪ್ರಕರಣಗಳನ್ನು ಪತ್ತೆ ಹಚ್ಚಿದ ಕಂಕನಾಡಿ ನಗರ ಪೊಲೀಸರನ್ನು ಮಾನ್ಯ ನಗರ ಪೊಲೀಸ್ ಆಯುಕ್ತರು ಅಭಿನಂದಿಸಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!