March 16, 2025

ಮೂವರು ಬಿಜೆಪಿ ನಗರಸಭೆ ಸದಸ್ಯರ ಸದಸ್ಯತ್ವ ಅನರ್ಹಗೊಳಿಸಿದ ಆಯುಕ್ತರು

0

ಗದಗ: ಸಾಲು ಲೀಸ್ ಅವಧಿ ವಿಸ್ತರಣೆ ಪ್ರಕರಣ ಸಂಬಂಧಿಸಿದ ಅನರ್ಹ ಬೀತಿ ಎದುರಿಸುತ್ತಿದ್ದ ಮೂವರು ಬಿಜೆಪಿ ನಗರಸಭೆ ಸದಸ್ಯರನ್ನು ಸದಸ್ಯತ್ವ ಸ್ಥಾನದಿಂದ ಅನರ್ಹಗೊಳಿಸುವಂತೆ ಬೆಳಗಾವಿ ಪ್ರಾದೇಶಿಕ ಆಯುಕ್ತರು ಆದೇಶಿಸಿದ್ದಾರೆ.

ವಕಾರು ಸಾಲು ಲೀಸ್ ಪ್ರಕಣ ಸಂಬಂಧಿಸಿದಂತೆ ಠರಾವು ನಕಲಿ ಕುರಿತು ಪ್ರಕರಣ ಇದಾಗಿದೆ. ಮಾಜಿ ಅಧ್ಯಕ್ಷೆ ಹಾಗೂ ಸದಸ್ಯೆ ಉಷಾ ದಾಸರ, ಸದಸ್ಯರಾದ ಅನಿಲ ಅಬ್ಬಿಗೇರಿ ಹಾಗೂ ಗೊಳಪ್ಪ ಮುಷಿಗೇರಿ ಅಮಾನತ್ತಿಗೆ ಒಳಪಟ್ಟ ಸದಸ್ಯರಾಗಿದ್ದಾರೆ.

ಪ್ರಾದೇಶಿಕ ಆಯುಕ್ತರಿಂದ ಆದೇಶ ಪ್ರತಿ ಜಿಲ್ಲಾಧಿಕಾರಿ ಕಚೇರಿಗೆ ರವಾನೆ ಆಗಿವೆ. ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಅವರು ರಜೆ ಮೇಲೆ ತೆರಳಿರುವ ಹಿನ್ನೆಲೆ ಸೋಮವಾರ ಅಮಾನತ್ತು ಪ್ರಕ್ರಿಯೆ ಜರುಗಬಹುದು ಎಂದು ಜಿಲ್ಲಾಡಳಿತ ಮೂಲಗಳು ವಿಜಯವಾಣಿಗೆ ದೃಢಪಡಿಸಿವೆ.

 

 

Leave a Reply

Your email address will not be published. Required fields are marked *

error: Content is protected !!