March 19, 2026

ಪುತ್ತೂರು: ಇತ್ತಂಡದ ನಡುವೆ ಪರಸ್ಪರ ಹಲ್ಲೆ: ಇಬ್ಬರು ಆರೋಪಿಗಳ ಬಂಧನ

0
image_editor_output_image170651457-1739574612172.jpg

ಪುತ್ತೂರು: ಬೊಳುವಾರಿನಲ್ಲಿ ಎರಡು ದಿನಗಳ ಹಿಂದೆ ಇತ್ತಂಡದ ನಡುವೆ ಮಾತಿನ ಚಕಮಕಿ ನಡೆದು ಪರಸ್ಪರ ಹಲ್ಲೆ ನಡೆಸಿದ ಆರೋಪಿಗಳಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆಗೆ ಸಂಬಂಧಿಸಿ ಹಲ್ಲೆಗೊಳಗಾದ ಟಿಪ್ಪರ್‌ಚಾಲಕ ಬಾಲಳಗೋಡು ನಿವಾಸಿ ಉಮೇಶ್ ಅವರು ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದರು.

ಅವರು ನೀಡಿದ ದೂರಿನಂತೆ ನರ್ಮೇಶ್ ಮತ್ತು ಬನ್ನೂರು ನೆಕ್ಕಿಲದ ಪ್ರಸಾದ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಆ ಬಳಿಕ ಆರೋಪಿಗಳನ್ನು ಪೊಲೀಸರು ಬಂಧಿಸಿ ಫೆ.14 ರಂದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಆರೋಪಿಗಳಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

Leave a Reply

Your email address will not be published. Required fields are marked *

error: Content is protected !!