March 15, 2025

ಉಡುಪಿ: ಆಕಸ್ಮಿಕವಾಗಿ ಬೆಂಕಿ: ಗುಜರಿ ಅಂಗಡಿ ಸುಟ್ಟು ಭಸ್ಮ

0

ಉಡುಪಿ: ಗುಜರಿ ಅಂಗಡಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಗುಜರಿ ಅಂಗಡಿ ಸಂಪೂರ್ಣ ಸುಟ್ಟ ಭಸ್ಮವಾದ ಘಟನೆ ನಗರದ ಅಂಬಾಗಿಲು- ಪೆರಂಪಳ್ಳಿ ರಸ್ತೆಯಲ್ಲಿ ಸಂಭವಿಸಿದೆ.

ಹನೀಫ್ ಎಂಬವರಿಗೆ ಸೇರಿದ ಗುಜರಿ ಅಂಗಡಿಯಲ್ಲಿ ಆರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ಕಾಣಿಸಿಕೊಂಡ ಬೆಂಕಿ ಆಮೇಲೆ ತೀವ್ರಗೊಂಡಿದ್ದು, ಅಪಾರ ಹಾನಿಯಾಗಿದೆ. ಗುಜರಿ ಅಂಗಡಿಯಲ್ಲಿ ಟಯರ್, ಆಯಿಲ್, ಪೇಪರ್ ಪ್ಲಾಸ್ಟಿಕ್‌ಗಳನ್ನು ಶೇಖರಣೆ ಮಾಡಿ ಇಡಲಾಗಿತ್ತು. ಉಡುಪಿ ಮತ್ತು ಮಲ್ಪೆಯ ಅಗ್ನಿಶಾಮಕದಳ ನಿರಂತರ ಕಾರ್ಯಾಚರಣೆ ಮಾಡಿತು.

ಬೆಂಕಿಯನ್ನು ಹತೋಟಿಗೆ ತರಲು ಕಷ್ಟವಾಯಿತು. ಕೂಡಲೇ ಅಕ್ಕಪಕ್ಕದ ಮನೆಯವರನ್ನು ಖಾಲಿ ಮಾಡಿಸಿದರು. ಅಮೂಲ್ಯ ವಸ್ತುಗಳನ್ನು ಮತ್ತು ದಾಖಲೆಗಳನ್ನು ತೆಗೆದುಕೊಂಡು ಹೋಗುವಂತೆ ಸೂಚಿಸಿದರು.

 

 

Leave a Reply

Your email address will not be published. Required fields are marked *

error: Content is protected !!