ಬಂಡೀಪುರ ರಸ್ತೆಯ ಪಕ್ಕ ನಿಂತಿದ್ದ ಕಾಡಾನೆ ಜೊತೆ ಪೋಟೋ ಕ್ಲಿಕ್: ಯುವಕನಿಗೆ 25 ಸಾವಿರ ರೂ. ದಂಡ

ಚಾಮರಾಜನಗರ: ಬಂಡೀಪುರ ರಸ್ತೆಯ ಪಕ್ಕ ನಿಂತಿದ್ದ ಕಾಡಾನೆ ಜೊತೆ ಪೋಟೋ ಕ್ಲಿಕ್ಕಿಸಿದ್ದಕ್ಕೆ ಯುವಕನಿಗೆ 25 ಸಾವಿರ ರೂಪಾಯಿ ದಂಡ ವಿಧಿಸಿದ ಘಟನೆ ನಡೆದಿದೆ.
ಗುಂಡ್ಲುಪೇಟೆಯ ಶಾಹುಲ್ ಹಮೀದ್ ಆಹಾರವನ್ನು ಅರಸಿಕೊಂಡು ಊಟಿ ರಸ್ತೆಯಲ್ಲಿ ಬರುತ್ತಿತ್ತು. ಕಾಡಾನೆ ಬಂದದ್ದನ್ನು ನೋಡಿದ ಯುವಕ ಅದರ ಮುಂದೆ ಫೋಟೊ ಕ್ಲಿಕ್ಕಿಸಿ, ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ್ದಾನೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಹುಚ್ಚಾಟ ಮೆರೆದ ಯುವಕನನ್ನು ಬಂಡೀಪುರ ಅರಣ್ಯ ಇಲಾಖೆಯು 25 ಸಾವಿರ ರೂ. ದಂಡ ವಿಧಿಸಿದ್ದಾರೆ. ಅಲ್ಲದೇ ಇನ್ನು ಮುಂದಕ್ಕೆ ಈ ರೀತಿಯ ತಪ್ಪಾಗದಂತೆ ಬಿಸಿ ಮುಟ್ಟಿಸಿ ಆತನನ್ನು ಕಳುಹಿಸಿದ್ದಾರೆ.