March 19, 2026

ಉಡುಪಿ: ಸಿಎ ರಾಕೇಶ್ ಕಾಮತ್ ನಿಧನ

0
image_editor_output_image1107149146-1738828270234.jpg

ಉಡುಪಿ: ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಶಿರ್ವ ಮಂಚಕಲ್ ನಿವಾಸಿ ಸಿಎ ರಾಕೇಶ್ ಕಾಮತ್ (32) ಅಲ್ಪ ಕಾಲದ ಅಸೌಖ್ಯದಿಂದ ಫೆ. 5 ರಂದು ಬೆಂಗಳೂರಿನ‌ ಮಣಿಪಾಲ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

ಇವರು ಖ್ಯಾತ ಉದ್ಯಮಿ , ಬಾಲಕೃಷ್ಣ ಕಾಮತ್ ಅವರ ಪುತ್ರ.ಕೆಲಸದ ನಿಮಿತ್ತ ಹೈದರಾಬಾದ್ ಗೆ ತೆರಳಿದ್ದ ಅವರು ಮನೆಗೆ ವಾಪಸ್ ಆದಾಗ ಅಸ್ವಸ್ಥಗೊಂಡಿದ್ದರು.

ವೈದ್ಯರಲ್ಲಿ ಚಿಕಿತ್ಸೆ ಪಡೆದು ಮನೆಗೆ ಬಂದವರಿಗೆ ಮತ್ತೆ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡು ಕುಸಿದು ಬಿದ್ದಿದ್ದಾರೆ.ಬಳಿಕ ಪತ್ನಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದ್ದು ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಮೃತ ರಾಕೇಶ್ ಅವರು ಪತ್ನಿ ಸಿಎ ಶೃತಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!