ವಿಟ್ಲ ಉರೂಸ್: ಸ್ಟಿಕ್ಕರ್ ಬಿಡುಗಡೆ
ವಿಟ್ಲ: ಇದೇ ಪೆಬ್ರವರಿ 19ರಿಂದ 22 ರ ವರೆಗೆ ವಿಟ್ಲ ಕೇಂದ್ರ ಜುಮಾ ಮಸೀದಿಯಲ್ಲಿ ನಡೆಯುವ ಧಾರ್ಮಿಕ ಮತಪ್ರವಚನ ಹಾಗೂ ಉರೂಸ್ ಸಮಾರಂಭದ ಪ್ರಚಾರದ ಸ್ಟಿಕ್ಕರ್ ನ್ನು ಉರೂಸ್ ಸಮಿತಿ ಅಧ್ಯಕ್ಷ ವಿ.ಕೆ.ಎಂ ಅಶ್ರಫ್ ಬಿಡುಗಡೆಗೊಳಿಸಿದರು.
ಉಪಾಧ್ಯಕ್ಷ ಇಸ್ಮಾಯಿಲ್ ಪರ್ತಿಪಾಡಿ, ಕಾರ್ಯದರ್ಶಿ ರಫೀಕ್ ಪೊನ್ನೋಟು, ಜೊತೆ ಕಾರ್ಯದರ್ಶಿ ಮಹಮ್ಮದ್ ಅಲಿ, ಕೋಶಾಧಿಕಾರಿ ಬಿ.ಕೆ.ಅಬ್ದುಲ್ ಖಾದರ್, ಮಸೀದಿಯ ಜೊತೆ ಕಾರ್ಯದರ್ಶಿ ಅಬೂಬಕರ್ ಅನಿಲಕಟ್ಟೆ, ವಿ.ಕೆ.ಎಂ ಹಂಝ, ಇಕ್ಬಾಲ್ ಹಳೆಮನೆ, ಅಬ್ದುಲ್ ರಹಿಮಾನ್ ದೀಪಕ್, ಅಶ್ರಫ್ ಕುಂಡಡ್ಕ, ಮದರಸ ಅಧ್ಯಕ್ಷ ಶಮೀರ್ ಪಳಿಕೆ, ಫಾರೂಕ್ ವಿಟ್ಲ, ಹನೀಫ್ ಹಳೆಮನೆ, ಹಮೀದ್ ಕನ್ಯಾನ, ರಶೀದ್ ನೆತ್ರೆಕೆರೆ ಮುಂತಾದವರು ಈ ಸಂದರ್ಭ ಉಪಸ್ಥಿತರಿದ್ದರು.




