March 18, 2026

ಮದುವೆಗೆ ವಧು ತೋರಿಸುವ ನೆಪದಲ್ಲಿ ಹನಿಟ್ರ್ಯಾಪ್: ನಾಲ್ವರು ಮಹಿಳೆಯರೂ ಸೇರಿದಂತೆ 6 ಮಂದಿಯ ಬಂಧನ

0
image_editor_output_image990856576-1738562446021.jpg

ಬೆಂಗಳೂರು: ಮದುವೆಗೆ ವಧು ತೋರಿಸುವ ನೆಪದಲ್ಲಿ ಹನಿಟ್ರ್ಯಾಪ್ ಮಾಡಿ ಸುಲಿಗೆ ಮಾಡುತ್ತಿದ್ದ ನಾಲ್ವರು ಮಹಿಳೆಯರೂ ಸೇರಿದಂತೆ ಆರು ಆರೋಪಿಗಳನ್ನು ಹೆಬ್ಬಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಭದ್ರಪ್ಪ ಲೇಔಟ್‌ನ ಮಂಜುಳಾ (45), ಮಂಗನಹಳ್ಳಿ ತಾವರೆಕೆರೆಯ ಶಿಲ್ಪಾ (45), ಎಂ.ಎಸ್.ಪಾಳ್ಯದ ಲೀಲಾವತಿ (37), ಹೆಬ್ಬಾಳದ ವಿಜಯಮ್ಮ (52) ಹಾಗೂ ಎಚ್‌.ವೆಂಕಟೇಶ್, ವಿದ್ಯಾರಣ್ಯಪುರದ ಎಂ.ಹರೀಶ್ (41) ಬಂಧಿತರು.

ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಲಯವು ಎಲ್ಲ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

error: Content is protected !!