March 18, 2026

ಉಡುಪಿ: 89 ಲಕ್ಷ ರೂ. ವಂಚನೆ, ಆರೋಪಿಯ ಬಂಧನ

0
image_editor_output_image167246565-1738499826315.jpg

ಉಡುಪಿ ಜಿಲ್ಲಾ ಸೆನ್ ಠಾಣಾ ಪೊಲೀಸರಿಂದ ಕಾರ್ಯಾಚರಣೆ ನಡೆಸಿ ಓರ್ವ ಆರೋಪಿಯ ಬಂಧನ ಪ್ರಕರಣದಲ್ಲಿ ಒಟ್ಟು ರೂ, 7,00,000/- ನಗದು ಸ್ವಾಧೀನಪಡಿಸಲಾಗಿದೆ.

ಸಂತ್ರಸ್ಥ ಕನ್ನಾರ್‌ ಸಂತೋಷ ಕುಮಾರ್‌ (45) , ತಂದೆ: ದಿ. ಕನ್ನಾರ್‌ ಶಂಕರ ಆಚಾರ್ಯ, ಉಡುಪಿ ರವರಿಗೆ ದಿನಾಂಕ:11.09.2024 ರಂದು ಅಪರಿಚಿತರು ಕರೆಮಾಡಿ Telecom Regulatory Authority of India ದಿಂದ ಕರೆ ಮಾಡುತ್ತಿದ್ದು, ನಿಮ್ಮ ಮೊಬೈಲ್‌ ನಂಬ್ರವು ನಿಮ್ಮ ಹೆಸರಿನಲ್ಲಿ ಇದೆ ಈ ನಂಬ್ರದಲ್ಲಿ ಇಲ್ಲೀಗಲ್‌ ಅಡ್ವಟೈಸ್‌ಮೆಂಟ್‌ ಹಾಗೂ ಹೆರಾಸಿಂಗ್‌ ಟೆಕ್ಸ್ಟ್‌ ಮೆಸೇಜಸ್‌ ಆಗಿದ್ದು, ನಿಮ್ಮ ಮೇಲೆ ಒಟ್ಟು 17 ಎಫ್‌.ಐ.ಆರ್‌ ಆಗಿದ್ದು, ಇನ್ನು 2 ಗಂಟೆಯ ಒಳಗೆ ನಿಮ್ಮ ಹೆಸರಿನಲ್ಲಿರುವ ಎಲ್ಲಾ ಕಾಂಟಾಕ್ಟ್‌ ನಂಬ್ರ ಡಿಸ್‌ಕನೆಕ್ಟ್‌ ಮಾಡುತ್ತೇವೆ. ನಿಮ್ಮ ಮೇಲೆ ಆರೆಸ್ಟ್‌ ವಾರಂಟು ಆಗಿರುತ್ತದೆ ಎಂಬುದಾಗಿ ಬೆದರಿಸಿದ್ದಾರೆ.

ನಂತರ ವಾಟ್ಸಪ್‌ ವಿಡಿಯೋ ಕರೆ ಮಾಡಿದ್ದು, ಕರೆ ಮಾಡಿದ ವ್ಯಕ್ತಿಯು ಪೊಲೀಸ್‌ ಅಧಿಕಾರಿ ಸಮವಸ್ತ್ರದಲ್ಲಿದ್ದು, ಇನ್ಸಪೆಕ್ಟರ್‌ ಸೈಬರ್‌ ಅಂದೇರಿ ಈಸ್ಟ್‌ ಮುಂಬಾಯಿ ಎಂದು ಹೇಳಿ ಕೇಸು ಆಗಿರುವ ಬಗ್ಗೆ ಹಾಗೂ ಸಂತ್ರಸ್ಥರ ಆಧಾರ್‌ ಕಾರ್ಡ್‌ ಲಿಂಕಿನಲ್ಲಿರುವ ಬ್ಯಾಂಕ್‌ ಅಕೌಂಟ್‌ ನರೇಶ್‌ ಗೋಯೆಲ್‌ ಎಂಬಾತನ ಮನಿ ಲಾಂಡ್ರಿಂಗ್‌ ಕೇಸ್‌ನಲ್ಲಿ ಅಕೌಂಟ್‌ ಇನ್‌ವಾಲ್‌ಮೆಂಟ್‌ ಇದೆ ಎಂದು ತಿಳಿಸಿ ಆದಾಯದ ಮೂಲ ಚೆಕ್‌ ಮಾಡುವುದಾಗಿ ತಿಳಿಸಿ ಬ್ಯಾಂಕ್‌ ಖಾತೆ ಹಾಗೂ ಅದರಲ್ಲಿನ ಹಣದ ವಿವರವನ್ನು ಪಡೆದು ಹಣವನ್ನು ಆರ್‌ಬಿಐಯಿಂದ ಫಂಡ್‌ ವೆರಿಪೇಕಶನ್‌ ಮಾಡಲು State Bank of India ಕ್ಕೆ ಜಮಾ ಮಾಡಲು ಹೇಳಿ ಹಣದ ಬಗ್ಗೆ ಕ್ಲೀಯರ್‌ ಆಗುವವರೆಗೆ ನಿಮ್ಮನ್ನು ವರ್ಚುವಲ್‌ ಆರೆಸ್ಟ್‌ ಮಾಡುವುದಾಗಿ ತಿಳಿಸಿ ಸಂತ್ರಸ್ಥರಿಂದ ರೂ.89,00,000/- ಹಣವನ್ನು ವರ್ಗಾಯಿಗೊಂಡಿದ್ದ.

ಈ ಬಗ್ಗೆ ಕನ್ನಾರ್‌ ಸಂತೋಷ ಕುಮಾರ್‌ ರವರು ನೀಡಿದ ದೂರಿನಂತೆ ಈ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 67/2024 ಕಲಂ: 66 (C) 66 (D) ಐಟಿ ಕಾಯ್ದೆ 308 (6) 318 (4) BNS ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

Leave a Reply

Your email address will not be published. Required fields are marked *

error: Content is protected !!