March 18, 2026

ಬೆಳ್ತಂಗಡಿ: ಸ್ಕಿಡ್ ಆಗಿ ಬಿದ್ದ ಬೈಕ್, ಧರ್ಮಸ್ಥಳದ ನಿವಾಸಿ ಮಿಥುನ್ ಕರ್ಕೇರ ಮೃತ್ಯು

0
image_editor_output_image1255532320-1737093939271.jpg

ಬೆಳ್ತಂಗಡಿ: ಬೈಕೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದ ಪರಿಣಾಮ ಯುವಕನೋರ್ವ ಮೃತಪಟ್ಟ ಘಟನೆ ಕಲ್ಮಂಜ ನಿಡಿಗಲ್ ಸಮೀಪ ತಡರಾತ್ರಿ ನಡೆದಿದ್ದು, ಧರ್ಮಸ್ಥಳ ಗ್ರಾಮದ ಮುಂಡ್ರುಪಾಡಿ ನಿವಾಸಿ ಮಿಥುನ್ ಕರ್ಕೇರ(25) ಮೃತಪಟ್ಟಿದ್ದಾರೆ.

ಯಾವುದೋ ಕಾರ್ಯಕ್ರಮಕ್ಕೆಂದು ಮಂಗಳೂರಿಗೆ ತೆರಳಿದ್ದ ಮಿಥುನ್ ಕರ್ಕೇರ ಅಲ್ಲಿಂದ ರಾತ್ರಿ ಹಿಂದಿರುಗುವ ವೇಳೆ ಕಲ್ಮಂಜ ನಿಡಿಗಲ್ ಸಮೀಪ ಬೈಕ್‌ ಸ್ಕಿಡ್ ಆಗಿ ರಸ್ತೆಗೆ ಉರುಳಿಬಿದ್ದಿದೆ.

ಈ ವೇಳೆ ತಲೆಭಾಗಕ್ಕೆ ಗಂಭೀರ ಗಾಯವಾಗಿತ್ತು. ಸ್ಥಳೀಯರು ಅವರನ್ನು ತಕ್ಷಣ ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗಿದೆ ಅವರು ಕೊನೆಯುಸಿರೆಳೆದಿದ್ದಾರೆ.

Leave a Reply

Your email address will not be published. Required fields are marked *

error: Content is protected !!