March 18, 2026

ವಿಟ್ಲ: ಸೌಹಾರ್ಧ ಸಂಗಮ ಹಾಗೂ ಹತ್ತು ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಸಹಾಯಾಕ್ಕಾಗಿ ಕ್ರಿಕೆಟ್ ಪಂದ್ಯಾಟ-ಸಹಾಯಧನ ಹಸ್ತಾಂತರ

0
image_editor_output_image-1807401099-1736784582164

ವಿಟ್ಲ: ಡಿ’ ಗ್ರೂಪ್ ಸ್ಪೋರ್ಟ್ಸ್ ಕ್ಲಬ್, ಶೈನ್ ಅಟಾಕರ್ಸ್ ವಿಟ್ಲ ಹಾಗೂ ಹೋಟೆಲ್ ಶಾಲೆಟ್ ಬೆಂಗಳೂರು ಇದರ ವತಿಯಿಂದ ಸೌಹಾರ್ಧ ಸಂಗಮ ಹಾಗೂ ಹತ್ತು ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಸಹಾಯಾಕ್ಕಾಗಿ ಕ್ರಿಕೆಟ್ ಪಂದ್ಯಾಟ ವಿಟ್ಲ ಪದವಿ ಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ನಡೆಯಿತು.

ಈ ಪಂದ್ಯಾಕೂಟದ ಪರವಾಗಿ ವಿಠಲ ಪದವಿ ಪೂರ್ವ ಕಾಲೇಜಿನ ಪ್ರೌಡ ಶಾಲಾ ವಿಭಾಗದಲ್ಲಿ ಕಲಿಯುವ ಬಡ 10 ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಸಹಾಯಕ್ಕಾಗಿ ಸಹಾಯಧನವನ್ನು ಶಾಲೆಯ ಉಪಪ್ರಾಂಶುಪಾಲರಾದ ಕಿರಣ್ ಕುಮಾರ್ ಬ್ರಹ್ಮಾವರ ಹಾಗೂ ಪ್ರಸಾದ್ ಇವರಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಡಿ’ ಗ್ರೂಪ್(ರಿ) ವಿಟ್ಲ ಇದರ ಅಧ್ಯಕ್ಷರಾದ ರಿಯಾಝ್ ವಿ.ಹೆಚ್, ಕಾರ್ಯದರ್ಶಿಯಾದ ಶಕೀರ್ ಅಳಕೆಮಜಲು, ಜೊತೆ ಕಾರ್ಯದರ್ಶಿ ಹಂಝ ವಿ.ಕೆ.ಎಂ, ಕೋಶಾಧಿಕಾರಿ ಬಶೀರ್ ಬೊಬ್ಬೆಕ್ಕೇರಿ, ಡಿ’ ಗ್ರೂಪ್ ಆಂಬ್ಯುಲೆನ್ಸ್ ನಿರ್ವಾಹಕರಾದ ಹಂಝ ವಿ, ಸದಸ್ಯರಾದ ಸಮದ್ ಏರ್ ಸೌಂಡ್ಸ್, ರಾಝಿ ಡಿ, ಅಬೂಬಕ್ಕರ್ ಅನಿಲಕಟ್ಟೆ, ರಮೀಯ್, ಸಿಬಾಕ್ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!