February 4, 2026

ಸ್ವಾಗತ ನಾಮಫಲಕ್ಕೆ ಖಾಸಗಿ ಬಸ್ ಢಿಕ್ಕಿ: ಬಿ.ಸಿ.ರೋಡ್ ನಿವಾಸಿ, ಚಾಲಕ ಇಬ್ರಾಹಿಂ ಮೃತ್ಯು, ಎಂಟು ಮಂದಿಗೆ ಗಾಯ

0
image_editor_output_image-2133668597-1735374329013.jpg

ಕುಣಿಗಲ್: ಸ್ವಾಗತ ನಾಮಫಲಕ್ಕೆ ಖಾಸಗಿ ಬಸ್ ಒಂದು ಡಿಕ್ಕಿ ಹೊಡೆದು ಪಲ್ಟಿ ಹೊಡೆದ ಪರಿಣಾಮ ಚಾಲಕ ಮೃತಪಟ್ಟು ಎಂಟು ಮಂದಿ ಗಾಯಗೊಂಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 75 ರ ತಾಲೂಕಿನ ಅಂಚೇಪಾಳ್ಯ ಬಳಿ ಶನಿವಾರ ಬೆಳಗಿನ ಜಾವ ಸಂಬವಿಸಿದೆ.

ಮೃತರನ್ನು ಬಸ್ ಚಾಲಕ ಮಂಗಳೂರು ಬಿ.ಸಿ. ರೋಡ್ ನಿವಾಸಿ ಮಹಮದ್ ಇಬ್ರಾಹಿಂ ( 40) ಎಂದು ಗುರುತಿಸಲಾಗಿದೆ. ಖಾಸಗಿ ಬಸ್ ಉಡುಪಿಯಿಂದ ಬೆಂಗಳೂರು ಕಡೆಗೆ ಹೊರಟ್ಟಿದ್ದು, ಕುಣಿಗಲ್ ಸಮೀಪ ಬಸ್ ಚಾಲಕನ ನಿಯಂತ್ರಣ ತಪ್ಪಿ ಸ್ವಾಗತ ಕೊರುವ ನಾಮಫಲಕಕ್ಕೆ ಡಿಕ್ಕಿ ಹೊಡೆದಿದೆ. ಬಳಿಕ ಬಸ್ ಪಲ್ಟಿಯಾಗಿದೆ. ಘಟನೆಯಲ್ಲಿ ಚಾಲಕ ಸೇರಿದಂತೆ ಸುಮಾರು ಎಂಟು ಮಂದಿ ಗಾಯಗೊಂಡಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!