March 19, 2026

ಮಣಿಪಾಲ: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ

0
image_editor_output_image-2137722331-1735195532088.jpg

ಮಣಿಪಾಲ: ಬೆಂಗಳೂರಿನ ಮಣಿಪಾಲ ಆಸ್ಪತ್ರೆಯ ಕನ್ಸಲ್ಟೆಂಟ್ ಕಾರ್ಡಿಯೋಲಾಜಿಸ್ಟ್ ಡಾ.ಕೆ.ಎಸ್.ಎಸ್. ಭಟ್ ಅವರ ಪತ್ನಿ, ಹಿರಿಯ ವೈದ್ಯೆ ಡಾ. ಆಶಾ ಭಟ್ (79) ಅಸೌಖ್ಯದಿಂದ ಡಿ. 24ರಂದು ಬೆಂಗಳೂರು ಇಂದಿರಾನಗರದ ಸ್ವಗೃಹದಲ್ಲಿ ನಿಧನ ಹೊಂದಿದರು.

ಮೃತರು ಪತಿ, ಪುತ್ರನಾದ ಬೆಂಗಳೂರಿನ ಹೆಸರಾಂತ ಮನೋವೈದ್ಯ ಡಾ.ಶಾಮ್ ಭಟ್ ಮತ್ತು ಪುತ್ರಿಯಾದ ಮೆನೇಜ್ಮೆಂಟ್ ತಜ್ಞೆ ದೀಪಾ ಭಟ್ ಅವರನ್ನು ಅಗಲಿದ್ದಾರೆ.

ಜನರಲ್ ಪ್ರಾಕ್ಟೀಶನರ್ ಆದ ಡಾ. ಆಶಾ ಭಟ್ ಅವರು ನ್ಯೂಜಿಲೆಂಡ್, ಲಿಬಿಯಾ ಮೊದಲಾದ ದೇಶಗಳಲ್ಲಿ, ದಿಲ್ಲಿಯ ಪ್ರತಿಷ್ಠಿತ ಸಫ್ಜರ್‌ಜಂಗ್ ಆಸ್ಪತ್ರೆ ಮತ್ತು ಬೆಂಗಳೂರಿನ ಕ್ಲಿನಿಕ್‌ನಲ್ಲಿ ವೈದ್ಯಕೀಯ ಸೇವೆ ಸಲ್ಲಿಸಿದ್ದರು.

Leave a Reply

Your email address will not be published. Required fields are marked *

error: Content is protected !!