March 19, 2026

ಮಂಗಳೂರು: ಲೋಕಾಯುಕ್ತ ಹೆಸರಿನಲ್ಲಿ ವಂಚನೆಗೆ ಯತ್ನ: ಆರೋಪಿಯ ಬಂಧನ

0
image_editor_output_image-1384938937-1734938044754.jpg

ಮಂಗಳೂರು: ಲೋಕಾಯುಕ್ತ ಅಧಿಕಾರಿಯ ಹೆಸರು ಹೇಳಿಕೊಂಡು ವಂಚನೆಗೆ ಯತ್ನಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯ ಕದಿರಿ ತಾಲೂಕಿನ ನಲ್ಲಗುಟ್ಲಪಲ್ಲಿ ನಿವಾಸಿ ಧನಂಜಯ ರೆಡ್ಡಿ ತೋಟ ಬಂಧಿತ ಆರೋಪಿ.

ಆರೋಪಿಯು ಇದೇ ರೀತಿಯ ಕೃತ್ಯ ಎಸಗಿದ ಬಗ್ಗೆ ಈಗಾಗಲೇ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 385, 419, 420, 506 ಐಪಿಸಿ ಯಂತೆ ಹಾಗೂ 2019 ರಲ್ಲಿ ಹೈದರಾಬಾದ್ ನಗರದ ಶಾಬಾದ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 342, 352, 115, 120 ಐಪಿಸಿಯಂತೆ ಪ್ರಕರಣ ದಾಖಲಾಗಿ ತನಿಖೆಯಲ್ಲಿರುವುದಾಗಿ ತಿಳಿದುಬಂದಿದೆ.

Leave a Reply

Your email address will not be published. Required fields are marked *

error: Content is protected !!