ಬೈಕ್‌ನಲ್ಲಿ ಬಸ್ ನಿಲ್ದಾಣಕ್ಕೆ ಡ್ರಾಪ್ ಮಾಡುವಾಗ ಅಪಘಾತ: ತಂದೆ ಕಣ್ಣೆದುರೇ ಮಗಳು ಸಾವು
ಚಿಕ್ಕಬಳ್ಳಾಪುರ: ಬೆಂಗಳೂರಿಗೆ ಇಂಟರ್ನ್‍ಶಿಪ್‌ಗೆ ಅಂತ ಹೊರಟ ಮಗಳನ್ನ ಬೈಕ್‌ನಲ್ಲಿ ಬಸ್ ನಿಲ್ದಾಣಕ್ಕೆ ಡ್ರಾಪ್ ಮಾಡಲು ಬಂದ ತಂದೆ ಕಣ್ಣೆದುರೇ ಮಗಳು ಅಪಘಾತಕ್ಕೆ ಬಲಿಯಾಗಿರುವ ಹೃದಯವಿದ್ರಾವಕ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ ನಗರದ ಎಂ.ಜಿ ರಸ್ತೆಯ ಅಂಭಾಭವಾನಿ ಹೋಟೆಲ್ ಬಳಿ ಘಟನೆ ನಡೆದಿದ್ದು, 22 ವರ್ಷದ ಯೋಗಿತಾ ಮೃತ ದುರ್ದೈವಿ. ಅಂದಹಾಗೆ ಹಾಸನದ ಕಾಲೇಜಿನಲ್ಲಿ ಪಶು ವೈದ್ಯಕೀಯ ವಿದ್ಯಾರ್ಥಿನಿಯಾಗಿದ್ದ ಯೋಗಿತಾ, ಅಂತಿಮ ವರ್ಷ ಮುಗಿಸಿ ಬೆಂಗಳೂರಿನಲ್ಲಿ ಇಂಟರ್ನ್ ಶಿಪ್ ಮಾಡುತ್ತಿದ್ದಳು