March 18, 2026

ಬಂಟ್ವಾಳ: ಟಯರ್ ಸ್ಫೋಟಗೊಂಡು ಟೆಂಪೊ ಪಲ್ಟಿ

0
image_editor_output_image-1558497863-1734587506329

ಬಂಟ್ವಾಳ: ಬೆಂಗಳೂರಿನಿಂದ ಮಂಗಳೂರಿಗೆ ಹೂ ತರುತ್ತಿದ್ದ ಟೆಂಪೋ ಟ್ರಾವೆಲರ್ ಪಲ್ಟಿಯಾದ ಘಟನೆ ಫರಂಗಿಪೇಟೆಯಲ್ಲಿ ಇಂದು (ಡಿ.29) ಮುಂಜಾನೆ 7ಗಂಟೆಯ ವೇಳೆ ನಡೆದಿದೆ.

ಅಡ್ಯಾರ್ ನಲ್ಲಿ ಕಾರ್ಯಕ್ರಮ ನಿಮಿತ್ತ ಹೂ ಅಲಂಕಾರ ನಡೆಸುವುದಕ್ಕಾಗಿ ಬೆಂಗಳೂರಿನಿಂದ ಅಲಂಕಾರಿಕ ಹೂ ತುಂಬಿಸಿಕೊಂಡು ಹೊರಟಿದ್ದ ಹೊರಟಿದ್ದ ಟ್ರಾವೆಲರ್ ಫರಂಗಿಪೇಟೆ ಬರುವಷ್ಟರಲ್ಲಿ ಟಯರ್ ಬ್ಲಾಸ್ಟ್ ಆಗಿ ದುರ್ಘಟನೆ ಸಂಭವಿಸಿದೆ.

ವಾಹನದಲ್ಲಿದ್ದ ಹನ್ನೊಂದು ಮಂದಿ ಡೆಕೋರ್ ಕಾರ್ಮಿಕರು ಅದೃಷ್ಟವಶಾತ್ ಯಾವುದೇ ಗಯಾಗಳಾಗದೇ ಪಾರಾಗಿದ್ದಾರೆ. ವಾಹನ ರಸ್ತೆಗೆ ಮಗುಚಿ ಬಿದ್ದು ಅಲಂಕಾರಿಕ ಹೂ ರಸ್ತೆಯಲ್ಲೆಲ್ಲಾ ಚೆಲ್ಲಾಪಿಲ್ಲಿಯಾಗಿದೆ.

ಸ್ಥಳಕ್ಕೆ ಬಂಟ್ವಾಳ ಸಂಚಾರ ಠಾಣೆಯ ಪೊಲೀಸರು ಭೇಟಿ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!