ಕಬಡ್ಡಿ ಆಡುತ್ತಿದ್ದಾಗ ಕುಸಿದು ಬಿದ್ದು ಮತ್ತೋರ್ವ ಯುವಕ ಸಾವು
ಅಂಕೋಲಾ: ಕಬಡ್ಡಿ ಆಟ ಆಡುತ್ತಿರುವಾಗಲೇ ಮತ್ತೋರ್ವ ಯುವಕ ರಕ್ತದೊತ್ತಡ ಕಡಿಮೆಯಾಗಿ ಮೃತಪಟ್ಟ ಘಟನೆ ಅವರ್ಸಾದಲ್ಲಿ ಭಾನುವಾರ ನಡೆದಿದೆ.
ಬಾಸ್ಗೋಡದ ಸುದರ್ಶನ ವಿನಾಯಕ ಆಗೇರ (22) ಮೃತ ಯುವಕ. ಅವರ್ಸಾದ ಶ್ರೀ ಕಾತ್ಯಾಯನಿ ಯುವಕ ಸಂಘದಿಂದ ಆಗೇರ ಸಮಾಜದ ಜಿಲ್ಲಾಮಟ್ಟದ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿತ್ತು.
ಶನಿವಾರ ರಾತ್ರಿ ಪಂದ್ಯಾವಳಿಗೆ ಚಾಲನೆ ನೀಡಲಾಗಿತ್ತು. ಭಾನುವಾರ (ಡಿ.15 ರಂದು) ಬೆಳಗ್ಗೆ 8 ಗಂಟೆ ಸುಮಾರಿಗೆ ಪಂದ್ಯಾವಳಿ ಸೆಮಿಫೈನಲ್ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಕೊಗ್ರೆಯ ಮಹಾಸತಿ ತಂಡದಿಂದ ಆಟವಾಡಿ ವಿಜೇತರಾಗಿದ್ದರು. ಗೆಳೆಯರ ಜತೆ ಕುಳಿತಿದ್ದಾಗ ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ತೆರಳುವ ವೇಳೆ ಮೃತಪಟ್ಟಿದ್ದಾರೆ.