ವಿಟ್ಲ: ಗ್ಯಾಸ್ ಸಿಲಿಂಡರ್ ಕಳವು: ಕಳ್ಳರನ್ನು ಬೆನ್ನಟ್ಟಿ ಹಿಡಿದು ಪೋಲೀಸರಿಗೊಪ್ಪಿಸಿದ ಸಾರ್ವಜನಿಕರು
ವಿಟ್ಲ: ಗ್ಯಾಸ್ ಸಿಲಿಂಡರ್ ಕಳವು ಮಾಡಿದ ಆರೋಪಿ ಕಳ್ಳ ರನ್ನು ಬೆನ್ನಟ್ಟಿ ಹಿಡಿದು ಪೋಲೀಸರಿಗೊಪ್ಪಿಸಿದ ಘಟನೆ ವಿಟ್ಲ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ರೀಫಿಲ್‌ಗೆ ಇಟ್ಟಿದ್ದ ಗ್ಯಾಸ್ ಸಿಲಿಂಡರ್‌ನ್ನು ಹಗಲು ಹೊತ್ತಿನಲ್ಲೇ ಕಳ್ಳನನ್ನು ಸಾರ್ವಜನಿಕರು ಸಿಸಿ ಟಿವಿಯ ದೃಶ್ಯಾವಳಿಯಲ್ಲಿ ಗುರುತಿಸಿ ಪತ್ತೆ ಹಚ್ಚಿ, ಪೊಲೀಸರಿಗೊಪ್ಪಿಸಿದ ಘಟನೆ ವಿಟ್ಲ ಸಮೀಪದ ಕುಂಡಡ್ಕ ಹಡೀಲು ಎಂಬಲ್ಲಿ ನಡೆದಿದೆ.
ಇಡ್ಕಿದು ಒಡ್ಯಡ್ಕ ನಿವಾಸಿ ಅಶ್ರಫ್ ಯಾನೆ ಅಚ್ಚು ಎಂಬವ ಆರೋಪಿಯಾಗಿದ್ದು, ಈತನನ್ನು ಸಾರ್ವಜನಿಕರು ಹಿಡಿದು ಪೋಲೀಸರ ಕೈಗೆ ನೀಡಿದ್ದಾರೆ. ಹಡೀಲು ನಿವಾಸಿ ಪ್ರವೀಣ್ ಎಂಬವರ ಮನೆಯಲ್ಲಿ ರೀಫಿಲ್‌ಗೆ ಇಟ್ಟಿದ್ದ ಗ್ಯಾಸ್ ಸಿಲಿಂಡರ್‌ನ್ನು ಕಳ್ಳರು ಕದಿಯುವ ದೃಶ್ಯ ಮನೆಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಗ್ಯಾಸ್ ಸಿಲಿಂಡರ್ ಕಳವಾದ ವಿಚಾರ ತಿಳಿಯುತ್ತಿದ್ದಂತೆ ಸಿಸಿ.ಕ್ಯಾಮರದ ಪೂಟೇಜ್ ನ್ನು ಬಳಸಿಕೊಂಡು ಸಾರ್ವಜನಿಕರು ಕಳ್ಳನಿಗಾಗಿ ಬೇಟೆಯಾಡಿದ್ದಾರೆ. ಬೇರಿಕೆ ಎಂಬಲ್ಲಿ ಸಿಲಿಂಡರ್ ಕಳ್ಳರನ್ನು ಅಡ್ಡಗಟ್ಟಿ ವಿಚಾರಿಸಿದಾಗ ಸಾಕ್ಷಿ ಸಮೇತ ಸಿಕ್ಕಿಬಿದ್ದು ಸಾರ್ವಜನಿಕರ ಕೈಯಿಂದ ಗೂಸ ತಿಂದಿದ್ದಾರೆ.
ಬಳಿಕ ವಿಟ್ಲ ಪೊಲೀಸರಿಗೆ ಮಾಹಿತಿ ನೀಡಿದ್ದು, ತಕ್ಷಣ ಸ್ಥಳಕ್ಕಾಗಮಿಸಿದ ವಿಟ್ಲ ಠಾಣಾ ಪೊಲೀಸರು ಆರೋಪಿ ಅಶ್ರಫ್ ಯಾನೆ ಅಚೂಕು ಸಹಿತ ಕಳವಾದ ಗ್ಯಾಸ್ ಸಿಲಿಂಡರ್‌ನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.




