March 18, 2026

ಉಡುಪಿ: ಕೋಡಿ ಬೀಚ್‌ನಲ್ಲಿ ನೀರಿಗಿಳಿದ ಮೂವರಲ್ಲಿ ಇಬ್ಬರು ನೀರುಪಾಲು: ಓರ್ವನ ರಕ್ಷಣೆ

0
image_editor_output_image1233846184-1733641034371.jpg

ಉಡುಪಿ : ಬೀಚ್‌ಗೆ ತೆರಳಿದ್ದ ಮೂವರು ಸಹೋದರರ ಪೈಕಿ ಇಬ್ಬರು ನೀರುಪಾಲಾದ ದಾರುಣ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ಕೋಡಿ ಬೀಚ್‌ನಲ್ಲಿ ಶನಿವಾರ ಸಂಜೆ ಸಂಭವಿಸಿದೆ.

ಇಬ್ಬರು ನೀರುಪಾಲಾಗಿದ್ದರೆ ಮತ್ತೋರ್ವನನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಮನೆಯವರೊಂದಿಗೆ ಕೋಡಿ ಬೀಚ್‌ಗೆ ತೆರಳಿದ್ದ ಸಂದರ್ಭ ಈ ದುರ್ಘಟನೆ ಸಂಭವಿಸಿದೆ.

ಸಂಜೆ ಅಂಪಾರು ಗ್ರಾಮದ ಮೂಡುಬಗೆಯ ದಾಮೋದರ ಪ್ರಭು ಹಾಗೂ ಚಿತ್ರಾಕಲಾ ಪ್ರಭು ಮಕ್ಕಳೊಂದಿಗೆ ಕೋಡಿ ಬೀಚ್‌ಗೆ ಬಂದಿದ್ದರು .

ಈ ಸಂದರ್ಭ ದಂಪತಿ ಪುತ್ರರಾದ ದರ್ಶನ್‌ (18) ಧನರಾಜ್‌ (23) ಹಾಗೂ ಧನುಷ್‌ ನೀರಿಗಿಳಿದಿದ್ದಾರೆ. ಈ ಸಂದರ್ಭ ಸಮುದ್ರದ ಅಲೆಗಳಿಗೆ ಸಿಕ್ಕಿ ದರ್ಶನ್, ಧನರಾಜ್‌ ನೀರುಪಾಲಾಗಿದ್ದರೆ ಧನುಷ್‌ ನನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಮಕ್ಕಳನ್ನು ಕಳಕೊಂಡ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.

Leave a Reply

Your email address will not be published. Required fields are marked *

error: Content is protected !!