December 20, 2025

ಪಿ ಎಫ್ ಐ ಆಯೋಜಿಸಿದ ಪ್ರತಿಭಟನೆಗೆ ಮಾತ್ರ ಅವಕಾಶ:
ಎಸ್ಪಿ ಚಲೋ ಗೆ ಅವಕಾಶವಿಲ್ಲ: ಕಮಿಷನರ್ ಶಶಿಕುಮಾರ್

0
yszMucgx.jpg

ಮಂಗಳೂರು: ಉಪ್ಪಿನಂಗಡಿಯಲ್ಲಿ ನಡೆದ ಘಟನೆ, ಪಿಎಫ್ ಐ ಮುಖಂಡರ ಬಂಧನ ಖಂಡಿಸಿ ಪಿಎಫ್ ಐ ಸಂಘಟನೆ ವತಿಯಿಂದ ಮಂಗಳೂರಿನಲ್ಲಿ ಪ್ರತಿಭಟನೆ ಹಾಗೂ ಎಸ್ ಪಿ ಕಚೇರಿ ಚಲೋ ರ್‍ಯಾಲಿ ಆಯೋಜಿಸಲಾಗಿದ್ದು, ರ್‍ಯಾಲಿಗೆ ಅವಕಾಶವಿಲ್ಲ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ಮಾಹಿತಿ ನೀಡಿದ್ದಾರೆ.

ಉಪ್ಪಿನಂಗಡಿ ಘಟನೆ ಹಾಗೂ ಪಿಎಫ್ ಐ ಮುಖಂಡರ ಬಂಧನವನ್ನು ಖಂಡಿಸಿ ಪಿಎಫ್ ಐ ಸಂಘಟನೆ ಡಿಸೆಂಬರ್ ೧೭ರ ಶುಕ್ರವಾರದಂದು ಪ್ರತಿಭಟನೆಗೆ ನಿರ್ಧರಿಸಿದೆ ಹಾಗೂ ಎಸ್ ಪಿ ಕಚೇರಿಗೆ ಚಲೋ ರ್‍ಯಾಲಿ ನಡೆಸಲು ಮುಂದಾಗಿದೆ.

ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಪ್ರತಿಭಟನೆಗೆ ಅವಕಾಶವಿದೆ ಎಂದಿದ್ದಾರೆ. ಆದರೆ, ಎಸ್ ಪಿ ಕಚೇರಿಗೆ ಚಲೋ ರ್‍ಯಾಲಿಗೆ ಅವಕಾಶವಿಲ್ಲ ಎಂದಿದ್ದಾರೆ. ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಪ್ರತಿಭಟನಾಕಾರರು ಇಲಾಖೆಯ ಜೊತೆ ಸಹಕಾರ ನೀಡುವಂತೆ ಮನವಿ ಮಾಡಿದ್ದಾರೆ

Leave a Reply

Your email address will not be published. Required fields are marked *

You may have missed

error: Content is protected !!