ಬೆಳ್ತಂಗಡಿ: ತನಿಖೆ ನೆಪದಲ್ಲಿ ಯುವಕನಿಗೆ ಎನ್‌ಐಎ, ಬೆಳ್ತಂಗಡಿ ಪೊಲೀಸರಿಂದ ಹಲ್ಲೆ ಆರೋಪ: ಗಾಯಗೊಂಡಿರುವ ಸಂತ್ರಸ್ತ ಯುವಕ ಆಸ್ಪತ್ರೆಗೆ ದಾಖಲು
ಬೆಳ್ತಂಗಡಿ: ಹಳೆಯ ಪ್ರಕರಣವೊಂದರ ತನಿಖೆ ನೆಪದಲ್ಲಿ ಯುವಕನ ಮೇಲೆ ಎನ್‌ಐಎ ಮತ್ತು ಬೆಳ್ತಂಗಡಿ ಪೊಲೀಸರು ಪೊಲೀಸರು ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.
ಗಂಭೀರ ಗಾಯಗೊಂಡಿರುವ ಸ್ಥಿತಿಯಲ್ಲಿರುವ ಸಂತ್ರಸ್ತ ಯುವಕ ಸುಹೈಲ್ ಪಾಷಾ ಎಂಬವರನ್ನು ಚಿಕಿತ್ಸೆಗಾಗಿ ಮಂಗಳೂರಿನ ಸರ್ಕಾರಿ ವೆನ್ಹಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಕರಣವೊಂದರ ತನಿಖೆಯ ಸಂಬಂಧ ಎನ್.ಐ.ಎ ಅಧಿಕಾರಿಗಳು ಮತ್ತು ಬೆಳ್ತಂಗಡಿ ಪೊಲೀಸರ ತಂಡ ಗುರುವಾರ ಬೆಳ್ತಂಗಡಿ ತಾಲೂಕಿನಲ್ಲಿ ಆರೋಪಿಗಾಗಿ ಶೋಧ ನಡೆಸಿತ್ತು. ಈ ವೇಳೆ ಆರೋಪಿಯ ದೂರದ ಸಂಬಂಧಿಯಾಗಿರುವ ಸಬರಬೈಲು ನಿವಾಸಿ ಸುಹೈಲ್ ಪಾಷಾರ ಮನೆಗೆ ದಾಳಿ ನಡೆಸಿದ್ದರು ಎಂದು ತಿಳಿದುಬಂದಿದೆ. ಸಂತ್ರಸ್ತ ಯುವಕನನ್ನು ಸ್ಥಳೀಯರು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆಸ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಕುರಿತು ಎಸ್ ಡಿಪಿಐ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು ಎಕ್ಸ್ ಪೋಸ್ಟ್ ಮಾಡಿದ್ದು, ಮುಸ್ಲಿಂ ಯುವಕರ ಮೇಲೆ ನಿರಂತರವಾಗಿ ಸರಕಾರಿ ಪ್ರಾಯೋಜಿತ ಹಲ್ಲೆಗಳು ನಡೆಯುತ್ತಿದೆ, ಮಾನವ ಹಕ್ಕು ಆಯೋಗ ಮತ್ತು ಅಲ್ಪಸಂಖ್ಯಾತರ ಆಯೋಗ ರಾಜ್ಯದಲ್ಲಿ ಜೀವಂತ ಇದೆಯೇ ಎಂದು ಪ್ರಶ್ನಿಸಿದ್ದಾರೆ.




