March 18, 2026

Google map: ಮೊಬೈಲ್ ನೆಟ್ವರ್ಕ್ ಇಲ್ಲದೇ ಪರದಾಟ: ಭಯದಲ್ಲೇ ಇಡೀ ರಾತ್ರಿ ಅರಣ್ಯದಲ್ಲಿ ಕಳೆದಿರುವ ಕುಟುಂಬ

0
image_editor_output_image383768709-1733477116788.jpg

ಬೆಂಗಳೂರು: ಗೂಗಲ್ ಮ್ಯಾಪ್ ನೋಡಿ ಬಿಹಾರದ ಕುಟುಂಬ ಕಾರಿನಲ್ಲಿ ಹಾಗೇ ಬೆಳಗಾವಿಯ ಖಾನಾಪುರ ಭೀಮಗಢ ಅರಣ್ಯದ ಒಳಗೆ ಸುಮಾರು 7 ರಿಂದ 8 ಕಿಲೋ ಮೀಟರ್ ದೂರ ಹೋಗಿದ್ದಾರೆ. ಆದರೆ ರಾತ್ರಿ ಆಗಿದ್ದರಿಂದ ಕತ್ತಲಿನಲ್ಲಿ ಅವರು ವಾಪಸ್ ಬರಲು ಭಯಭೀತರಾಗಿದ್ದಾರೆ. ಅರಣ್ಯ ಪ್ರದೇಶದಲ್ಲಿ ಮೊಬೈಲ್ ನೆಟ್ವರ್ಕ್ ಸಿಗದೇ ಕುಟುಂಬ ಪರದಾಡಿದೆ. ಕಾರಿನಲ್ಲೇ ಇಡೀ ರಾತ್ರಿ ಭಯದಲ್ಲೇ ಕಳೆದಿದೆ.

ಬಳಿಕ ಧೈರ್ಯ ಮಾಡಿ 4 ಕಿಲೋ ಮೀಟರ್ ವರೆಗೆ ಹಿಂದಕ್ಕೆ ಬಂದ ಮೇಲೆ ಮೊಬೈಲ್ ನೆಟ್ವರ್ಕ್ ಸಿಕ್ಕಿದೆ. ತಕ್ಷಣ ಸಹಾಯಕ್ಕಾಗಿ 112 (ಪೊಲೀಸರಿಗೆ) ನಂಬರ್ ಗೆ ಕರೆ ಮಾಡಿ ಕುಟುಂಬದ ಸದಸ್ಯರು ತಮ್ಮ ಸಮಸ್ಯೆಯನ್ನ ಸಂಪೂರ್ಣವಾಗಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಪೊಲೀಸರು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಕಾಡಿನಿಂದ ಕುಟುಂಬಸ್ಥರನ್ನು ಸುರಕ್ಷಿತವಾಗಿ ಕರೆದುಕೊಂಡು ಬಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!