December 4, 2024

ಬ್ರಿಟನ್ ದೊರೆ ಮೂರನೇ ಚಾರ್ಲ್ಸ್ ಅವರ ಸಹಾಯಕ ಆಪ್ತ ಕಾರ್ಯದರ್ಶಿಯಾಗಿ ಕಾಸರಗೋಡು ಮೂಲದ ಮುನಾ ಶಂಸುದ್ದೀನ್ ನೇಮಕ

0

ಲಂಡನ್: ಬ್ರಿಟನ್ ದೊರೆ ಮೂರನೇ ಚಾರ್ಲ್ಸ್ ಅವರ ಸಹಾಯಕ ಆಪ್ತ ಕಾರ್ಯದರ್ಶಿಯಾಗಿ ಕಾಸರಗೋಡು ಮೂಲದ ಮುನಾ ಶಂಸುದ್ದೀನ್ ನೇಮಕಗೊಂಡಿದ್ದಾರೆ.

ಕಾಸರಗೋಡು ಮೂಲದ ಮುನಾ ಶಂಶುದ್ದೀನ್ ಅವರು ಬ್ರಿಟನ್ ರಾಜ 3ನೇ ಚಾರ್ಲ್ಸ್ ಅವರ ಸಹಾಯಕ ಖಾಸಗಿ ಕಾರ್ಯದರ್ಶಿಯಾಗಿ ಹೆಮ್ಮೆಯಿಂದ ಸೇವೆ ಸಲ್ಲಿಸಿ ವಿಶ್ವ ವೇದಿಕೆಯಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಕಳೆದ ವರ್ಷ ನಡೆದ ಈ ಪ್ರತಿಷ್ಠಿತ ನೇಮಕಾತಿ ಆಕೆಯ ಕುಟುಂಬಕ್ಕೆ ಮಾತ್ರವಲ್ಲದೆ, ಮಲಯಾಳಿ ಸಮುದಾಯಕ್ಕೆ ಇದು ಗೌರವ ತಂದಿದೆ.

ಕಾಸರಗೋಡು ತೆರುವತ್ ಹಾಶಿಮ್ ಸ್ಟ್ರೀಟ್ ನಿವಾಸಿ ಮರ್ಹೂಂ ಶಂಸುದ್ದೀನ್ ಮತ್ತು ಸೈದುನ್ನಿಸಾ ದಂಪತಿ ಪುತ್ರಿಯಾಗಿರುವ ಮುನಾ ಅವರು ಲಂಡನ್ ನಲ್ಲೇ ಬೆಳೆದು ಅಲ್ಲೇ ಶಿಕ್ಷಣ ಪಡೆದಿದ್ದಾರೆ.

ತನ್ನ ಪ್ರಸ್ತುತ ಪಾತ್ರದಲ್ಲಿ, ಕಿಂಗ್ ಚಾರ್ಲ್ಸ್‌ಗೆ ಅಧಿಕೃತ ಕಾರ್ಯಕ್ರಮಗಳನ್ನು ನಿರ್ವಹಿಸುವ ಜವಾಬ್ದಾರಿಯನ್ನು ಮುನಾಗೆ ವಹಿಸಲಾಗಿದೆ ಮತ್ತು ಅಂತರರಾಷ್ಟ್ರೀಯ ಪ್ರವಾಸಗಳಲ್ಲಿ ರಾಜನ ಜೊತೆಯಲ್ಲಿರುತ್ತಾಳೆ. ಆಕೆಯ ಜವಾಬ್ದಾರಿಗಳು ಬ್ರಿಟಿಷ್ ರಾಜಮನೆತನದಿಂದ ಆಕೆಯ ಮೇಲೆ ಇಟ್ಟಿರುವ ನಂಬಿಕೆಯನ್ನು ಪ್ರತಿಬಿಂಬಿಸುತ್ತವೆ, ಆಕೆಯ ರಾಜತಾಂತ್ರಿಕ ಕೌಶಲ್ಯ ಮತ್ತು ಸಾರ್ವಜನಿಕ ಸೇವೆಗೆ ಸಮರ್ಪಣೆಯನ್ನು ಗುರುತಿಸುತ್ತವೆ.

ಬ್ರಿಟಿಷ್ ಕಾನೂನು ವಿಶ್ವವಿದ್ಯಾನಿಲಯದಲ್ಲಿ ವೃತ್ತಿ ಜೀವನವನ್ನು ಆರಂಭಿಸಿದ ಅವರು ಲಂಡನ್ ವಿದೇಶಾಂಗ ಕಾಮನ್ವೆಲ್ತ್ ಡೆವಲಪ್ ಮೆಂಟ್ ವಿಭಾಗದಲ್ಲಿ ಉದ್ಯೋಗದಲ್ಲಿದ್ದಾಗ ಬ್ರಿಟನ್ ದೊರೆಯ ಸಹಾಯಕ ಖಾಸಗಿ ಕಾರ್ಯದರ್ಶಿಯಾಗುವ ಅವಕಾಶ ಅವರನ್ನು ಅರಸಿ ಬಂದಿದೆ.

ಮುನಾ ಶಂಸುದ್ದೀನ್ ಅವರು ನಾಟಿಂಗ್ ಹ್ಯಾಮ್ ವಿಶ್ವವಿದ್ಯಾನಿಲಯದಲ್ಲಿ ಗಣಿತ ಮತ್ತು ಎಂಜಿನಿಯರ್ ನಲ್ಲಿ ಅಧ್ಯಯನ ಪೂರ್ಣ ಗೊಳಿಸಿದ ನಂತರ ಬ್ರಿಟಿಷ್ ವಿದೇಶಾಂಗ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದರು. ಜೆರುಸಲೇಮ್ ನಲ್ಲಿ ಕಾನ್ಸೆಲೆಟ್ ಜನರಲ್ ಮತ್ತು ಪಾಕಿಸ್ತಾನದ ಕರಾಚಿಯಲ್ಲಿ ಡೆಪ್ಯೂಟಿ ಹೆಡ್ ಆಫ್ ಮಿಷನ್ ಸೇರಿದಂತೆ ಪ್ರಮುಖ ರಾಜತಾಂತ್ರಿಕ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!