March 21, 2026

ಬಂಟ್ವಾಳ: ಬಿ.ಸಿ.ರೋಡಿನ ಅಜ್ಜಿಬೆಟ್ಟು ರೈಲು ಹಳಿಯ ಬಳಿ ವ್ಯಕ್ತಿಯ ಮೃತದೇಹ ಪತ್ತೆ

0
image_editor_output_image1321952127-1732942768300.jpg

ಬಂಟ್ವಾಳ: ಬಿ.ಸಿ.ರೋಡಿನ ಅಜ್ಜಿಬೆಟ್ಟು ಶಾಲಾ ಬಳಿ ರೈಲ್ವೇ ಹಳಿಯಲ್ಲಿ ವ್ಯಕ್ತಿಯೊಬ್ಬರು ರೈಲು ಢಿಕ್ಕಿಯಾಗಿ ಮೃತಪಟ್ಟ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ.

ಮಾಣಿ ಗ್ರಾಮದ ಕಾಪಿಕಾಡ್ ನಿವಾಸಿ ವಸಂತ ಸೀನ ಪೂಜಾರಿ(೪೨) ಮೃತಪಟ್ಟವರು.

ಶುಕ್ರವಾರ ಬೆಳಗ್ಗೆ ರೈಲ್ವೇ ಹಳಿಯಲ್ಲಿ ರೈಲಿನಡಿಗೆ ಬಿದ್ದು ಸಂಪೂರ್ಣವಾಗಿ ಭಿದ್ರಗೊಂಡ ದೇಹವೊಂದು ಪತ್ತೆಯಾಗಿದ್ದು, ಬಳಿಕ ಪರಿಶೀಲಿಸಿದಾಗ ವಸಂತ ಅವರ ಮೃತದೇಹ ಎಂದು ಗುರುತಿಸಲಾಗಿದೆ.

ಅವರು ನ. ೨೮ರ ರಾತ್ರಿಯಿಂದ ನಾಪತ್ತೆಯಾಗಿದ್ದು, ರಾತ್ರಿ ಕರೆ ಮಾಡಿ ನಾಳೆಯಿಂದ ನಾನು ಇಲ್ಲ ಎಂದು ಹೇಳಿದ್ದು, ಹೀಗಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಸಂಶಯಿಸಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!