March 18, 2026

ಕಾರ್ಕಳ: ಗೆಲ್ಲು ಕಡಿಯಲು ಮರ ಏರಿದ್ದ ವ್ಯಕ್ತಿ ಬಿದ್ದು ಮೃತ್ಯು

0
image_editor_output_image-1747167197-1732764822223.jpg

ಕಾರ್ಕಳ : ಗೆಲ್ಲು ಕಡಿಯಲು ಮರ ಏರಿದ ವ್ಯಕ್ತಿ ಕೆಳಕ್ಕೆ ಬಿದ್ದು ಮೃತ ಪಟ್ಟ ದಾರುಣ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ಹೆಬ್ರಿಯ ಕಬ್ಬಿನಾಲೆಯಲ್ಲಿ ಸಂಭವಿಸಿದೆ.

ಕಬ್ಬಿನಾಲೆಯ ಹೊನ್ನಕೊಪ್ಪಲ ನಿವಾಸಿ ಜ್ಞಾನೇಶ್ವರ್ ಹೆಬ್ಬಾರ್ (59) ಮೃತ ದುರ್ದೈವಿಯಾಗಿದ್ದಾರೆ. ಹೆಬ್ಬಾರ್ ಅವರು ಬುಧವಾರ ಬೆಳಿಗ್ಗೆ ಮನೆಯ ಬಳಿಯಿದ್ದ ಮರದ ಗೆಲ್ಲು ಕಡಿಯುತ್ತಿದ್ದ ವೇಳೆ ಆಯ ತಪ್ಪಿ ಮರದಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ.

ಜಾಣ ಎಂದೇ ಕರೆಯಲ್ಪಡುತ್ತಿದ್ದ ಇವರು ಮುನಿಯಾಲು ಪಬ್ಲಿಕ್ ಸ್ಕೂಲ್‌ನ ಮಾಜಿ ಅಧ್ಯಕ್ಷರಾಗಿದ್ದು, ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು. ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!