March 18, 2026

ಮಾಂಸಾಹಾರಿ ಆಹಾರವನ್ನು  ನಿಲ್ಲಿಸುವಂತೆ ಪ್ರಿಯಕರ ಒತ್ತಡ: ಏರ್ ಇಂಡಿಯಾ ಪೈಲಟ್ ಆತ್ಮಹತ್ಯೆ

0
image_editor_output_image502971306-1732764491414.jpg

ಮುಂಬೈ: ಆಹಾರ ಪದ್ಧತಿಯನ್ನು ಬದಲಾಯಿಸುವಂತೆ ಮತ್ತು ಮಾಂಸಾಹಾರಿ ಆಹಾರವನ್ನು ಸೇವಿಸುವುದನ್ನು ನಿಲ್ಲಿಸುವಂತೆ ಪ್ರಿಯಕರ ಒತ್ತಡ ಹೇರಿದ ಪರಿಣಾಮ ಏರ್ ಇಂಡಿಯಾ ಪೈಲಟ್ ನೇಣಿಗೆ ಶರಣಾದ ಘಟನೆ ಮುಂಬೈನ ಅಂಧೇರಿಯ ಮರೋಲ್ ಪ್ರದೇಶದಲ್ಲಿ ನಡೆದಿದೆ.

ಸೃಷ್ಟಿ ತುಲಿ (25) ಆತ್ಮಹತ್ಯೆಗೆ ಶರಣದ ಪೈಲಟ್. ಈಕೆ ಫ್ಲ್ಯಾಟ್‌ವೊಂದರಲ್ಲಿ ಡೇಟಾ ಕೇಬಲ್‌ನಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಕುರಿತು ಯಾವುದೇ ಡೆತ್‌ನೋಟ್ ಪತ್ತೆಯಾಗಿಲ್ಲ. ಕುಟುಂಬಸ್ಥರು ನೀಡಿದ ದೂರಿನ ಆಧಾರದ ಮೇಲೆ ಆಕೆಯ ಪ್ರಿಯಕರ ಆದಿತ್ಯ ಪಂಡಿತ್‌ನನ್ನು (27) ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!