ಚಿಕ್ಕಮಗಳೂರು: ಬೈಕ್ ಹಾಗೂ ಗೂಡ್ಸ್ ವಾಹನಕ್ಕೆ ಡಿಕ್ಕಿ ಹೊಡೆದ ಟಿಪ್ಪರ್: ಓರ್ವ ಮೃತ್ಯು
ಚಿಕ್ಕಮಗಳೂರು: ಟಿಪ್ಪರ್ ಚಾಲಕನ ಅತಿವೇಗದ ಚಾಲನೆಯಿಂದ ಬೈಕ್ ಮತ್ತು ಗೂಡ್ಸ್ ವಾಹನಕ್ಕೆ ಡಿಕ್ಕಿ ಹೊಡೆದು, ಓರ್ವ ಮೃತಪಟ್ಟ ಘಟನೆ ಚಿಕ್ಕಮಗಳೂರು ನಗರದ ಎನ್ ಎಂ ಸಿ ಸರ್ಕಲ್ ಬಳಿ ನಡೆದಿದೆ. ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ.
ಟಿಪ್ಪರ್ ಉದ್ಯಮಿ ಸುದರ್ಶನ್ ಎಂಬುವವರಿಗೆ ಸೇರಿದ್ದಾಗಿದ್ದು, ಚಾಲಕನ ಅತೀವೇಗದ ಚಾಲನೆಯಿಂದ ಬೈಕ್, ಹಾಗೂ ಗೂಡ್ಸ್ ವಾಹನಕ್ಕೆ ಡಿಕ್ಕಿ ಹೊಡೆದಿದೆ.
ಹಗಲು ಹೊತ್ತಿನಲ್ಲಿ ನಗರಪ್ರದೇಶಕ್ಕೆ ಟಿಪ್ಪರ್ ಗಳಿಗೆ ಪ್ರವೇಶ ಇಲ್ಲದಿದ್ದರೂ ಟಿಪ್ಪರ್ ಚಾಲಕರು ಅನಧಿಕೃತ ಸಂಚಾರ ನಡೆಸುತ್ತಿದ್ದಾರೆ, ಇದರಿಂದ ಹಲವಾರು ಬಾರಿ ಇಂತಹ ಘಟನೆಗಳು ನಡೆದಿದೆ ಎನ್ನಲಾಗಿದೆ.





