March 18, 2026

ನ.25ರಂದು ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನ ಕಲ್ಲಡ್ಕ ಶಾಖೆಯ ನೂತನ ಕಟ್ಟಡ ಸಮೃದ್ಧಿ ಉದ್ಘಾಟನೆ

0
image_editor_output_image-322623359-1732373417826

ಕಲ್ಲಡ್ಕ: ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನ ನೂತನ ಕಟ್ಟಡ ಸಮೃದ್ಧಿ ಉದ್ಘಾಟನೆ ಹಾಗೂ ಸ್ವಂತ ಕಟ್ಟಡಕ್ಕೆ ಕಲ್ಲಡ್ಕ ಶಾಖೆಯ ಸ್ಥಳಾಂತರ ಕಾರ್ಯಕ್ರಮ ನವೆಂಬರ್ 25 ರಂದು ಕಲ್ಲಡ್ಕ ದಲ್ಲಿ ನಡೆಯಲಿದೆ.

ನೂತನ ಕಟ್ಟಡವನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಇವರು ಉದ್ಘಾಟಿಸಲಿದ್ದಾರೆ.

ಶಾಖಾ ಕಚೇರಿಯನ್ನು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಭದ್ರಾತಾ ಕೊಠಡಿಯನ್ನು ಬಂಟ್ವಾಳದ ಶಾಸಕ ರಾಜೇಶ್ ನಾಯ್ಕ್ ಯು ಉದ್ಘಾಟಿಸಲಿದ್ದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಕಟ್ಟಡದ ಹೆಸರು ಅನಾವರಣ ಗೊಳಿಸಲಿದ್ದಾರೆ.

ಗಣಕೀಕರಣ ಉದ್ಘಾಟನೆಯನ್ನು ಮಾಜಿ ಸಚಿವರಾದ ಬಿ ರಮಾನಾಥ ರೈ ಮಾಡಲಿದ್ದು ದೀಪ ಪ್ರಜ್ವಲನೆಯನ್ನು ಸಹಕಾರ ಸಂಘಗಳ ಉಪನಿಬಂಧಕರಾದ ರಮೇಶ್ ಎಚ್ ನೆರವೇರಿಸಲಿದ್ದಾರೆ.ಸಭಾಧ್ಯಕ್ಷತೆಯನ್ನು ಬ್ಯಾಂಕನ ಅಧ್ಯಕ್ಷರಾದ ಎಚ್ ಜಗನ್ನಾಥ ಸಾಲಿಯಾನ್ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕರಾದ ಕೆ ಪದ್ಮನಾಭ ಕೊಟ್ಟಾರಿ, ರುಕ್ಮಯ ಪೂಜಾರಿ, ಕ್ಯಾಂಪ್ಕೋ ನಿರ್ದೇಶಕರಾದ ಎಸ್ ಆರ್ ಸತೀಶ್ಚಂದ್ರ, ಬಾಳ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಅಣ್ಣು ಪೂಜಾರಿ, ಗೋಳ್ತಮಜಲು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರೇಮಾ ಪುರುಷೋತ್ತಮ ಆಗಮಿಸಲಿದ್ದಾರೆ.ಎಂದು ಸಂಘದ ಅಧ್ಯಕ್ಷರಾದ ಎಚ್ ಜಗನ್ನಾಥ್ ಸಾಲಿಯಾನ್, ಉಪಾಧ್ಯಕ್ಷರಾದ ಮೋಹನ್ ಕೆ ಎಸ್, ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಕೃಷ್ಣ ಮುರುಳಿ ಶ್ಯಾಮ್ ಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!