November 21, 2024

ವಿಟ್ಲ: ನ.24ರಂದು ದಿ| ಬಿ. ಸುಮಿತ್ರಾ ಟೀಚರ್‌‌ ಸ್ಮರಣಾರ್ಥ ಉಚಿತ ಹೃದ್ರೋಗ ಮತ್ತು ಕಣ್ಣಿನ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ

0

ವಿಟ್ಲ: ಸ್ವಸ್ತಿಕ ಫ್ರೆಂಡ್ಸ್ ವಿಟ್ಲ ಇದರ ಆಶ್ರಯದಲ್ಲಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ (ರಿ.) ಪುತ್ತೂರು ತಾಲೂಕು ಎ.ಜೆ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಮಂಗಳೂರು ಲಕ್ಷ್ಮೀ ಮೆಮೋರಿಯಲ್ ಎಜುಕೇಶನ್‌ ಟ್ರಸ್ಟ್ ಭಾರತೀಯ ಅಂಚೆ ಇಲಾಖೆ ಇದರ ಸಹಯೋಗದಲ್ಲಿ ದಿ| ಬಿ. ಸುಮಿತ್ರಾ ಟೀಚರ್‌‌ ಸ್ಮರಣಾರ್ಥ ಉಚಿತ ಹೃದ್ರೋಗ ಮತ್ತು ಕಣ್ಣಿನ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರವು ನ.24ನೇ ರವಿವಾರ ಬೆಳಿಗ್ಗೆ 9:00 ಗಂಟೆಗೆ ಸರಕಾರಿ ಪ್ರೌಢ ಶಾಲೆ(R.M.S.A) ವಿಟ್ಲ ಇಲ್ಲಿ ನಡೆಯಲಿದೆ.

ಬೆಳಿಗ್ಗೆ 9:00 ಗಂಟೆಗೆ ತಾರಾನಾಥ ವಿಟ್ಲ ಅಧ್ಯಕ್ಷರು ಸ್ವಸ್ತಿಕ್ ಫ್ರೆಂಡ್ಸ್ ವಿಟ್ಲ ಇವರ ಅಧ್ಯಕ್ಷತೆಯಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಡಾ| ವಿ.ಕೆ ಹೆಗ್ಡೆ ವೈದ್ಯರು ಪುಷ್ಪಕ್ ಕ್ಲಿನಿಕ್ ವಿಟ್ಲ ಇವರು ನೆರವೇರಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಸತ್ಯನಾರಾಯಣ ಭಟ್ ಉದ್ಯಮಿಗಳು ಉಕ್ಕುಡ ದರ್ಬೆ, ಬಿ. ಪುಷ್ಪಲತಾ ಮಾರ್ನಮಿಗಡ್ಡೆ ಸಮಾಖಸೇವಕಿ ಮತ್ತು ನಿಕಟಪೂರ್ವ ಕಾರ್ಯದರ್ಶಿ ಲಯನ್ಸ್‌‌ ಕ್ಲಬ್‌ ವಿಟ್ಲ, ರಾಮದಾಸ್ ಶೆಟ್ಟಿ ಅಧ್ಯಕ್ಷರು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ (ರಿ.) ಪುತ್ತೂರು ತಾಲೂಕು, ಹರೀಶ್ ಸಿ ಎಚ್ ಅಧ್ಯಕ್ಷರು ರೋಟರಿ ಕ್ಲಬ್ ವಿಟ್ಲ, ಸಂಜೀವ ಪೂಜಾರಿ ಮಾಲಕರು ಭಾರತ್ ಗ್ರೂಪ್ಸ್ ವಿಟ್ಲ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಇದರ ಸಹಭಾಗಿತ್ವದಲ್ಲಿ ಆಧಾರ್ ನೋಂದಾವಣೆ ಹಾಗೂ ತಿದ್ದುಪಡಿ

ಅಧಾರ್ : ಹೊಸ ನೋಂದಾವಣೆ : (0 – 18 ವರ್ಷದವರಿಗೆ ಮಾತ್ರ )
ಬೇಕಾಗುವ ದಾಖಲೆಗಳು : ಹೆಸರು ಮತ್ತು ಜನನ ಪ್ರಮಾಣ ಪತ್ರ, ವಿಳಾಸ ದಾಖಲೆ

ವಿಳಾಸ ಬದಲಾವಣೆ :
ಬೇಕಾಗುವ ದಾಖಲೆಗಳು : ಪಂಚಾಯತ್ ವಿಳಾಸ ದೃಢೀಕರಣ ಪತ್ರ ಪಡಿತರ ಚೀಟಿ, ತಹಶೀಲ್ದಾರ್ ಅಥವಾ ಗಜೆಟೆಡ್ ಆಫೀಸರ್ ಸರ್ಟಿಫಿಕೇಟ್, ಮತದಾರರ ಗುರುತಿನ ಚೀಟಿ, ಪಾಸ್ ಪೋರ್ಟ್

ಆಧಾರ್ ಜನನ ದಿನಾಂಕ ಮತ್ತು ಹೆಸರು ಬದಲಾವಣೆ :
ಬೇಕಾಗುವ ದಾಖಲೆಗಳು : ಜನನ ಪ್ರಮಾಣ ಪತ್ರ (18 ವರ್ಷ ಒಳಗಿನವರಿಗೆ ಮಾತ್ರ) ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ಪಾಸ್ ಪೋರ್ಟ್,

ಆಧಾರ್ – 5 ಹಾಗೂ 15 ವರ್ಷ ಪೂರ್ಣಗೊಳಿಸಿದ ಮಕ್ಕಳ ಕಡ್ಡಾಯ ಐಯೋಮೆಟ್ರಿಕ್ ನೋಂದಣಿ ಹಾಗೂ ಪರಿಷ್ಠರಣೆ :
ಬೇಕಾಗುವ ದಾಖಲೆಗಳು : ಈಗಾಗಲೇ ಹೊಂದಿರುವ ಆಧಾರ್ ಕಾರ್ಡ್‌ನ ಮೂಲ ಪ್ರತಿ ಹಾಗೂ ಮೊಬೈಲ್ ಫೋನ್ ಆಧಾರ್ ಮೊಬೈಲ್ ನಂಬರ್ ತಿದ್ದುಪಡಿ :
ಬೇಕಾಗುವ ದಾಖಲೆಗಳು : ಈಗಾಗಲೇ ಹೊಂದಿರುವ ಆಧಾರ್ ಕಾರ್ಡ್ ಹಾಗೂ ಮೊಬೈಲ್ ಫೋನ್

ಇ-ಶ್ರಮ್ ಕಾರ್ಡ್:
ಅಸಂಘಟಿತ ವಲಯಗಳಲ್ಲಿನ ಕಾರ್ಮಿಕರು ಮತ್ತು ಕಾರ್ಮಿಕರು ವಿವಿಧ ಪ್ರಯೋಜನಗಳನ್ನು ಪಡೆಯಬಹುದು ಉದಾಹರಣೆಗೆ 60 ವರ್ಷಗಳ ನಂತರ ಪಿಂಚಣಿ, ಮರಣ ವಿಮೆ, ಅಸಮರ್ಥತೆಯ ಸಂದರ್ಭದಲ್ಲಿ ಎಲ್ಲಾ ಹೊಸ ಸರ್ಕಾರಿ ಯೋಜನೆಗಳು ಮತ್ತು ಹಣಕಾಸಿನ ನೆರವು ಇತ್ಯಾದಿ ಇ-ಶ್ರಮ್ ಪೋರ್ಟಲ್ ಮೂಲಕ ಸೌಲಭ್ಯಗಳಿಗೆ ಅಸಂಘಟಿತ ಕಾರ್ಮಿಕರಿಗೆ ಪ್ರವೇಶವನ್ನು ಒದಗಿಸುವ ಯೋಜನೆ.

Leave a Reply

Your email address will not be published. Required fields are marked *

error: Content is protected !!