ಮುಲ್ಕಿ: ಎರಡು ಸ್ಕೂಟರ್ ಗಳ ಅಪಘಾತ: ಓರ್ವ ಸಾವು, ಇಬ್ಬರು ಗಂಭೀರ
ಮುಲ್ಕಿ: ಎರಡು ಸ್ಕೂಟರ್ ಗಳ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ಸಾವನಪ್ಪಿ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಕಿನ್ನಿಗೋಳಿ ಕಟೀಲು ಹೆದ್ದಾರಿಯ ಉಲ್ಲಂಜೆ ರಸ್ತೆ ಬಳಿ ರವಿವಾರ ನಡೆದಿದೆ.
ಮೃತರನ್ನು ಪಲಿಮಾರು ನಿವಾಸಿ ರವೀಂದ್ರ (42) ಹಾಗೂ ಗಾಯಗೊಂಡವರನ್ನು ಕಿನ್ನಿಗೋಳಿ ಸಮೀಪದ ಐಕಳ ನಿವಾಸಿ ಕೃಷ್ಣ ಮಾರ್ಲ ಹಾಗೂ ಕುಮಾರ್ ಎಂದು ಗುರುತಿಸಲಾಗಿದೆ. ಮೃತ ರವೀಂದ್ರ ಅವರು ಕುಮಾರ್ ಎಂಬವರನ್ನು ತಮ್ಮ ಸ್ಕೂಟರ್ ನಲ್ಲಿ ಕಟೀಲ್ ಕಡೆ ಹೋಗುತ್ತಿದ್ದ ವೇಳೆ ಉಲ್ಲಂಜೆ ರಸ್ತೆಯ ಮುಗೆರೋಡಿ ಎನ್ ಕ್ಲೇವ್ ಬಳಿ ಅಡ್ಡರಸ್ತೆಯಿಂದ ಏಕಾಏಕಿ ಮುಖ್ಯ ರಸ್ತೆಗೆ ಕೃಷ್ಣ ಮಾರ್ಲ ಅವರ ಸ್ಕೂಟರ್ ಏಕಾಏಕಿ ಬಂದ ಕಾರಣ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ.




