ಸುಳ್ಯ: ನೇಣು ಬಿಗಿದು ಕಾಲೇಜ್ ವಿದ್ಯಾರ್ಥಿ ಆತ್ಮಹತ್ಯೆ
ಸುಳ್ಯ: ವಿದ್ಯಾರ್ಥಿಯೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಆಲೆಟ್ಟಿ ಗ್ರಾಮದ ಕಲ್ಲೆಂಬಿ ಎಂಬಲ್ಲಿ ನ.7ರಂದು ಸಂಜೆ ವರದಿಯಾಗಿದೆ.
ಕಲ್ಲೆಂಬಿ ಸ್ಥಾನದ ಮನೆಯ ರಾಘವ ಬೆಳ್ಚಪ್ಪಾಡ ಎಂಬವರ ಪುತ್ರ ಮಿಥುನ್ ರಾಜ್ ಎಂಬ ಯುವಕ ಮನೆಯಲ್ಲಿ ಯಾರು ಇಲ್ಲದೆ ಸಂದರ್ಭದಲ್ಲಿ ಮನೆಯ ಅಡುಗೆ ಕೋಣೆಯ ಪಕ್ಕಾಸಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.
ಮನೆಯವರು ಸುಳ್ಯಕ್ಕೆ ಮದುವೆಗೆಂದು ಬಂದಿರುವ ಸಂದರ್ಭದಲ್ಲಿ ಕೃತ್ಯವೆಸಗಿಕೊಂಡಿದ್ದು ಮನೆಯವರು ಹಿಂತಿರುಗಿ ಬಂದು ನೋಡಿದ ಮೇಲೆ ವಿಷಯ ತಿಳಿಯಿತು. ಸ್ಥಳಕ್ಕೆ ಸುಳ್ಯ ಪೋಲಿಸರು ಆಗಮಿಸಿ ಮಹಜರು ನಡೆಸಿ ಸರಕಾರಿ ಆಸ್ಪತ್ರೆಗೆ ಶವವನ್ನು ಮರಣೋತ್ತರ ಪರೀಕ್ಷೆಗೆಂದು ಕರೆ ತರಲಾಗಿದೆ.
ಮೃತಪಟ್ಟ ಯುವಕ ಸುಳ್ಯದ ಕೆ.ವಿ.ಜಿ.ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಯಾಗಿದ್ದು ತಾಯಿ, ಸಹೋದರ, ಸಹೋದರಿ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ. ಆತ್ಮಹತ್ಯೆಗೆ ಕಾರಣವೆನೆಂಬುದು ತಿಳಿದು ಬಂದಿಲ್ಲ.





