March 18, 2026

ಬೆಳ್ತಂಗಡಿ : ಕೆಲಸಕ್ಕೆ ಹೋದ ಯುವತಿ ನಾಪತ್ತೆ: ಯುವಕನೊಂದಿಗೆ ಪರಾರಿ ಶಂಕೆ- ಪ್ರಕರಣ ದಾಖಲು

0
IMG-20211026-WA0010

ಬೆಳ್ತಂಗಡಿ: ಕೆಲಸಕ್ಕೆ ಹೋಗಿ ಬರುವೆನೆಂದು ಹೇಳಿ ಹೋದ ಯುವತಿಯೊಬ್ಬಳು ಕಾಣೆಯಾಗಿರುವ ಘಟನೆ ವೇಣೂರು ಸಮೀಪ ಕರಿಮಣೇಲಿನಲ್ಲಿ ನಡಡೆದಿದೆ.

ಸಂಧ್ಯಾ (22) ಕಾಣೆಯಾದ ಯವತಿ.

ನ. 4ರಂದು  ಸಂಧ್ಯಾ ಮನೆಯಿಂದ ಕೆಲಸಕ್ಕೆ ಹೋದವಳು ಸಂಜೆ ತನ್ನ ಸಹೋದರಿಯ ಮೊಬೈಲ್‌ಗೆ ‘ನನಗೆ ಮದುವೆಯಾಗಿದೆ. ನನ್ನನ್ನು ಹುಡುಕಬೇಡಿ’ ಎಂಬುದಾಗಿ ವಾಟ್ಸಾಪ್‌ ಸಂದೇಶ ಕಳುಹಿಸಿದ್ದಾಳೆ. ಯುವಕನೊಬ್ಬನ ಜತೆ ತೆಗೆದಿರುವ ಭಾವಚಿತ್ರವನ್ನು ಸಹೋದರಿಗೆ ರವಾನಿಸಿದ್ದು, ಬಳಿಕ ಆಕೆಯ ಮೊಬೈಲ್‌ ಸ್ವಿಚ್ ಆಫ್‌ ಆಗಿದೆ.

ಆಕೆ ಕೆಲಸ ಮಾಡುವ ಕಡೆ ವಿಚಾರಿಸಿದಾಗ ಆಕೆ ಅಂದು ಕೆಲಸಕ್ಕೆ ಬಂದಿರಲಿಲ್ಲ ಎಂಬುವುದು ತಿಳಿದಿತ್ತು. ವೇಣೂರು ಪೊಲೀಸ್ ಠಾನೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ

Leave a Reply

Your email address will not be published. Required fields are marked *

error: Content is protected !!