ಮಂಗಳೂರು: ಸರಕಾರದ ಆದೇಶ ಮೀರಿ ಶಾಲಾ ಆವರಣದಲ್ಲಿ RSS ಚಟುವಟಿಕೆ: ವೀಡಿಯೋ ವೈರಲ್

ಮಂಗಳೂರು ತಾಲೂಕಿನ ಸುರತ್ಕಲ್ ಸಮೀಪದಲ್ಲಿರುವ ಮಂಗಳಪೇಟೆಯಲ್ಲಿರುವ ದ.ಕ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಆರ್‌ಎಸ್‌ಎಸ್ ಶಾಖೆ ನಡೆಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸರಕಾರದ ಆದೇಶ ಮೀರಿ ಶಾಲಾ ಆವರಣದಲ್ಲಿ ಸಂಘದ ಚಟುವಟಿಕೆ ನಡೆಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಶಾಲೆಯಿಂದ ಗ್ರಾಮ ಪಂಚಾಯತ್ ಹಾಗೂ ಶಿಕ್ಷಣ ಇಲಾಖೆಗೆ ಮಾಹಿತಿ ನೀಡಲಾಗಿದೆ.
ಅಂದ ಹಾಗೆ, ಈ ಶಾಲೆಯಲ್ಲಿ ಪ್ರತಿ ರವಿವಾರ ಸಂಘಪರಿವಾರದ ಕಾರ್ಯ ಚಟುವಟಿಕೆ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಆರ್ ಎಸ್ ಎಸ್ ಶಾಖೆ ನಡೆಸಲು ಅವಕಾಶ ಕೊಟ್ಟಿರುವುದು ಯಾರು ಎಂಬ ಪ್ರಶ್ನೆ ಕೂಡ ಎದ್ದಿದ್ದು, ಈ ಬಗ್ಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಏನು ಕ್ರಮ ಕೈಗೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.