ವಿಟ್ಲ: ಉದ್ಘಾಟನೆಗೆ ಸಿದ್ಧಗೊಂಡಿರುವ ಕೊಡಂಗಾಯಿ ಮಸೀದಿಗೆ ಖ್ಯಾತ ವಾಗ್ಮಿ ಸಿಂಸಾರುಲ್ ಹಕ್ ಹುದವಿ ಭೇಟಿ: ಮಸೀದಿ ನಿರ್ಮಾಣ ಸಮಿತಿ ವತಿಯಿಂದ ಸನ್ಮಾನ
ವಿಟ್ಲ: ಕೊಡಂಗಾಯಿ ಎಂಬಲ್ಲಿ ನವೀಕೃತಗೊಂಡು ಉದ್ಘಾಟನೆಗೆ ಸಿದ್ಧಗೊಂಡಿರುವ ಕೊಡಂಗಾಯಿ ಮಸ್ಜಿದುನ್ನೂರ್ ಗೆ ಖ್ಯಾತ ಪ್ರಭಾಷಣಕಾರ ಬಹು: ಸಿಂಸಾರುಲ್ ಹಕ್ ಹುದವಿ ಉಸ್ತಾದ್ ‘ರವರು ಭೇಟಿ ನೀಡಿ ಸಂದರ್ಶನಗೈದರು. ಅಲ್ಲಾಹನ ಭವನದ ಮಹತ್ವದ ಬಗ್ಗೆ ಎರಡು ಮಾತು ಹೇಳಿ ದುಆ ನೆರವೇರಿಸಿದರು.
ನವಿಕೃತ ಮಸ್ಜಿದ್ ನಿರ್ಮಾಣ ಸಮಿತಿ ವತಿಯಿಂದ ಉಸ್ತಾದರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಉದ್ಯಮಿ ಸುರಯ್ಯ ಖಾದರ್ ಹಾಜಿ, ಹಾಗೂ ಮಸ್ಜಿದ್ ಸಮಿತಿ ಹಾಗೂ ನಿರ್ಮಾಣ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು, ಈ ಸಂದರ್ಭ ಮಸ್ಜಿದುನ್ನೂರಿಯ ಅಧ್ಯಕ್ಷರಾದ ಅಬ್ದುಲ್ ರಹಮಾನ್ ಮುಸ್ಲಿಯಾರ್,ಪ್ರದಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಸಿ ಎಚ್, ಮಸ್ಜಿದ್ ನಿರ್ವಹಣಾ ಸಮಿತಿ ಅಧ್ಯಕ್ಷರಾದ ಹಮೀದ್ ಟಿ, ಕಾರ್ಯದರ್ಶಿ ಅಬ್ದುಲ್ ಮಜೀದ್ ಟಿ ಎಂ ಸಮೀತಿ ವತಿಯಿಂದ ಉಸ್ತಾದ್’ರವರನ್ನು ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಕೆ.ಎಂ.ಎ ಕೊಡಂಗಾಯಿ ಸ್ವಾಗತಿಸಿ ವಂದಿಸಿದರು.





