March 18, 2026

ಕಾಸರಗೋಡು: ಮನೆಯ ಸಿಟೌಟ್ ನಲ್ಲಿ ಹಾವು ಕಚ್ಚಿ ವ್ಯಕ್ತಿ ಮೃತ್ಯು

0
image_editor_output_image138476219-1729755515125

ಕಾಸರಗೋಡು: ಹಾವು ಕಡಿದು ಮಂಜೇಶ್ವರ ನಿವಾಸಿ ಯೋರ್ವರು ಮೃತ ಪಟ್ಟ ಘಟನೆ ಮೀಯಪದವು ಎಂಬಲ್ಲಿ ನಡೆದಿದೆ. ಮೀಯಪದವು ಪಳ್ಳತ್ತಡ್ಕದ ಅಶೋಕ್ (43) ಮೃತಪಟ್ಟ ದುರ್ದೈವಿ.

ಸೆ.18 ರಂದು ರಾತ್ರಿ ಮನೆಯ ಸಿಟೌಟ್ ನಲ್ಲಿ ಹಾವು ಕಡಿದಿತ್ತು. ಬಳಿಕ ಮಂಗಳೂರಿನ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆ. ಮೃತರು ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

ಗಾರೆಕೆಲಸ ಮಾಡುತ್ತಿದ್ದಾತ ರಾತ್ರಿ ವೇಳೆ ಮನೆಯ ಸಿಟೌಟ್ ನಲ್ಲಿದ್ದಂತಹ ಸಮಯದಲ್ಲಿ ಹಾವು ಕಡಿದಿದ್ದು, ತಕ್ಷಣ ಆಸ್ಪತ್ರೆಗೂ ದಾಖಲಿಸಿದ್ದರೂ ಆದರೂ ಪ್ರಯೋಜನವಾಗಲಿಲ್ಲ. ಮೃತ ಅಶೋಕ್ ಕೆಲದಿನಗಳ ಚಿಕಿತ್ಸೆ ಬಳಿಕ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!