ಪುತ್ತೂರು: ನ.2ರಂದು ವಸ್ತ್ರ ವಿತರಣೆ ಹಾಗೂ ಗೂಡುದೀಪ ಸ್ಪರ್ಧೆ ಅಶೋಕ ಜನಮನ ಕಾರ್ಯಕ್ರಮ: 75 ಸಾವಿರ ಜನರಿಗೆ ವಸ್ತ್ರ ವಿತರಣೆ-ಎಲ್ಲರಿಗೂ ಸಹಭೋಜನ: ಮಾಧ್ಯಮದವರ ಜತೆ ಸಂವಾದದಲ್ಲಿ ಅಶೋಕ್ ರೈ ಮಾಹಿತಿ
ಪುತ್ತೂರು: ರೈ ಎಸ್ಟೇಟ್ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ನ. 2 ರಂದು ನಡೆಯುವ 12 ನೇ ವರ್ಷದ ವಸ್ತ್ರ ವಿತರಣೆ ಹಾಗೂ ಗೂಡದೀಪ ಸ್ಪರ್ಧೆ ಅಶೋಕ ಜನಮನ ಕಾರ್ಯಕ್ರಮದ ಪೂರ್ವಭಾವಿಯಾಗಿ ಪತ್ರಿಕಾ/ಮಾಧ್ಯಮ ಮಿತ್ರರ ಜೊತೆ ಸಂವಾದ ಮತ್ತು ಔತಣಕೂಟ ಕಾರ್ಯಕ್ರಮ ಪುತ್ತೂರಿನ ಅಶ್ವಿನಿ ಹೊಟೇಲ್ ಸಭಾಂಗಣದಲ್ಲಿ ರೈ ಎಸ್ಟೇಟ್ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರು, ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಪತ್ರಕರ್ತರ ಜೊತೆ ಸಂವಾದ ನಡೆಸಿ ಮಾತನಾಡಿದ ಅಶೋಕ್ ಕುಮಾರ್ ರೈ ’ಇದೇ ನ. 2 ನೇ ಶನಿವಾರರಂದು ಅಶೋಕ ಜನಮನ-2024 ಎಂಬ ಹೆಸರಿನಲ್ಲಿ ವಸ್ತ್ರ ವಿತರಣೆ ಹಾಗೂ ಗೂಡದೀಪ ಸ್ಪರ್ಧೆ ಅದ್ದೂರಿ ಕಾರ್ಯಕ್ರಮ ಪುತ್ತೂರಿನ ಕೊಂಬೆಟ್ಟು ಕಾಲೇಜು ಕ್ರೀಡಾಂಗಣದಲ್ಲಿ ನಡೆಯಲಿದೆ. ಕಳೆದ 11 ವರ್ಷಗಳಿಂದ ರೈ ಎಸ್ಟೇಟ್ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ವತಿಯಿಂದ ವಸ್ತ್ರ ವಿತರಣೆ ಮತ್ತು ಸಹಭೋಜನ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದು, ನಮ್ಮ ಮನೆಯಲ್ಲೇ ಪ್ರಾರಂಭಿಸಿದ ಈ ಕಾರ್ಯಕ್ರಮದಲ್ಲಿ ಪ್ರತೀ ವರ್ಷ ನಮ್ಮ ಮನೆಗೆ ದೀಪಾವಳಿಯ ಸಮಯದಲ್ಲಿ ಒಂದಿಷ್ಟು ಜನ ಬರುತ್ತಿದ್ದರು. ಬಂದತಂಹ ಎಲ್ಲರಿಗೂ ನಮ್ಮ ಮನೆಯಲ್ಲೇ ಊಟ ಉಪಚಾರಗಳನ್ನು ನೀಡುತ್ತಿದ್ದೆವು. ಅಂದಿನಿಂದ ನಾವು ಬಂದಂತಹ ಎಲ್ಲರಿಗೂ ವಸ್ತ್ರ ವಿತರಿಸುವ ಸಂಕಲ್ಪ ಮಾಡಿದ್ದೆವು. ಆ ಸಂದರ್ಭದಲ್ಲಿ ನನ್ನ ತಾಯಿ ಒಂದು ಮಾತು ಹೇಳಿದ್ದರು ’ಯಾವುದಾದರೊಂದನ್ನು ಆರಂಭ ಮಾಡುವುದು ಸುಲಭ, ಆದರೆ ಅದನ್ನು ಮುಂದುವರೆಸಿಕೊಂಡು ಹೋಗೋದು ಕಷ್ಟ ಎಂದು ಹೇಳಿದ್ದರು. ಆಗ ತಾಯಿಯಲ್ಲಿ ನಾನು ಹೇಳಿದ್ದೆ..’ಅಮ್ಮಾ ದೇವರು ನಮಗೆ ಎಸ್ಟು ದಿನಗಳ ಕಾಲ ಇಂತಹ ಕಾರ್ಯಕ್ರಮಗಳನ್ನು ನಡೆಸಲು ಶಕ್ತಿ ಕೋಡ್ತಾರೋ ಅಷ್ಟು ದಿನಗಳವರೆಗೆ ಮುಂದುವರೆಸೋಣ ಎಂದು ಹೇಳಿದ್ದೆ. ನನ್ನ ಮನೆಯವರ ಸಹಕಾರ ಹಾಗೂ ದೇವರ ಆಶೀರ್ವಾದದಿಂದ 12ನೇ ವರ್ಷಕ್ಕೆ ಕಾಲಿಟ್ಟಿದ್ದೇವೆ. 25 ಜನರಿಂದ ಪ್ರಾರಂಭಗೊಂಡ ಈ ಕಾರ್ಯಕ್ರಮ ಕಳೆದ ವರ್ಷ 63,500 ಜನರಿಗೆ ವಸ್ತ್ರ ವಿತರಣೆ ಮಾಡಿದ್ದೇವೆ. ಈ ಬಾರಿ 75,000/- ಜನರಿಗೆ ವಸ್ತ್ರ ವಿತರಣೆ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಈ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಸೀರೆ ಹಾಗೂ ಮಕ್ಕಳಿಗೆ ಮತ್ತು ಪುರುಷರಿಗೆ ಬೆಡ್‌ಶಿಟ್ ಕೊಡುವ ಬಗ್ಗೆ ಯೋಜನೆ ಕೈಗೊಂಡಿದ್ದೇವೆ. ವಿಶೇಷವಾಗಿ ಎಲ್ಲರಿಗೂ ಸಹ ಭೋಜನ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಇದಕ್ಕಾಗಿ 300 ಅಡುಗೆ ಭಟ್ಟರುಗಳನ್ನು ಸೂಚಿಸಿದ್ದೇವೆ.
ನ. 2 ರಂದು ನಡೆಯುವ ಅಶೋಕ ಜನಮನ-2024 ಕಾರ್ಯಕ್ರಮಕ್ಕೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನು ಆಹ್ವಾನಿಸಿದ್ದೇವೆ. ಜೊತೆಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಉಸ್ತುವಾರಿ ಮಂತ್ರಿ ಗುಂಡೂರಾವ್, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಸೇರಿತದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಹೇಳಿದರು.
ಬಳಿಕ ಶಾಸಕನ ನೆಲೆಯಲ್ಲಿ ಮಾತನಾಡಿದ ಅವರು ’ಕಳೆದ 2023-24 ಸಾಲಿನಲ್ಲಿ 1479.59 ಕೋಟಿ ಅನುದಾನ ಪುತ್ತೂರು ವಿಧಾನ ಸಭಾ ಕ್ಷೇತ್ರಕ್ಕೆ ಬಂದಿರುತ್ತದೆ. ಅದರಲ್ಲಿ ಕುಡಿಯುವ ನೀರಿಗಾಗಿ 1,010 ಕೋಟಿ ಸೇರಿ 1478.59 ಕೋಟಿ ಅನುದಾನದ ಬಂದಿದೆ. ಈ ಅನುದಾನದ ಕೆಲಸಗಳು ಪ್ರಾರಂಭದ ಹಂತದಲ್ಲಿದೆ. ಕುಡಿಯುವ ನೀಡಿನ ಯೋಜನೆಗೆ ದೊಡ್ಡ ಮಟ್ಟದ ಕಾರ್ಯಕ್ರಮವನ್ನು ಈಗಾಗಲೇ ನಡೆಸಲಾಗಿದೆ. ಟೆಂಡರ್ ಆಗಿ ಹಣ ಬಿಡಿಗಡೆಯಾಗಿದೆ. ಕಾಮಗಾರಿಗಳೂ ಆರಂಭಗೊಂಡಿದೆ. ಮುಂದಿನ ದಿನಗಳಲ್ಲಿ ಶಿಲನ್ಯಾಸ ಕಾರ್ಯಕ್ರಮ ನಡೆಯಲಿದೆ. ನಿವೇಶನ ಇಲ್ಲದವರಿಗೆ ನಿವೇಶನ ಕೊಡುವುದು, ಬಡವರ ಬಗ್ಗೆ ಕಾಳಜಿ ವಹಿಸಿ ಅವರ ಕೆಲಸ ಮಾಡುವುದರ ಜೊತೆಗೆ ಪುತ್ತೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎಲ್ಲಾ ರೀತಿಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಲು ಯೋಜನೆಗಳನ್ನು ಕೈಗೊಳ್ಳಲಾಗಿದೆ. ಪ್ರತೀ ಸೋಮವಾರ ನನ್ನ ಕಚೇರಿಯಲ್ಲಿ ಇದ್ದು ಎಲ್ಲರನ್ನೂ ಭೇಟಿ ಮಾಡುತ್ತೇನೆ. ಕಚೇರಿಗೆ ಬಂದ ಎಲ್ಲರಿಗೂ ಅವರ ಸಮಸ್ಯೆಗಳಿಗೆ ಅಲ್ಲೇ ಪರಿಹಾರವನ್ನು ಒದಗಿಸುವ ಕಾರ್ಯ ಮಾಡುತ್ತಾ ಬಂದಿದ್ದೇನೆ ಎಂದು ಹೇಳಿದರು. ಸಂವಾದ ನಡೆದ ಬಳಿಕ ಪತ್ರಿಕಾ/ಮಾಧ್ಯಮ ಮಿತ್ರರಿಗೆ ಔತಣಕೂಟ ನೆರವೇರಿತು.




