May 5, 2026

ಪುತ್ತೂರು: ಮಹಿಳೆ ಜತೆ ಅನುಚಿತ ವರ್ತನೆ – ಪ್ರಕರಣ ದಾಖಲು

0
first-information-report

ಪುತ್ತೂರು : ಮಹಿಳೆ ಜೊತೆ ಅನುಚಿತವಾಗಿ ವರ್ತಿಸಿರುವ ಕುರಿತು ವ್ಯಕ್ತಿಯೋರ್ವರ ವಿರುದ್ಧ ಪ್ರಕರಣ ದಾಖಲಾಗಿದೆ.

ತಿಂಗಳಾಡಿ ಕೆದಂಬಾಡಿ ನಿವಾಸಿ ರಘುನಾಥ್ ರೈ ಎಂಬವರ ವಿರುದ್ಧ ಮಹಿಳೆ ದೂರು ನೀಡಿದ್ದು, ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪತಿ ನಿಧನದ ಬಳಿಕ ಮಹಿಳೆ ಮಕ್ಕಳೊಂದಿಗೆ ವಾಸವಾಗಿದ್ದು, ಸುಮಾರು 1 ವರುಷದಿಂದ ನೆರೆಯ ರಘುನಾಥ್ ರೈ ಎಂಬ ವ್ಯಕ್ತಿ ಅವರ ಮನೆಗೆ ಹೋಗಲು ಬೇರೆ ದಾರಿಯಿದ್ದರೂ ಮಹಿಳೆಯ ಮನೆ ಬಳಿಯಿಂದಾಗಿ ಹೋಗುತ್ತಿದ್ದು, ಈ ವೇಳೆ ಮಹಿಳೆಯ ಬಳಿ 500 ರೂ. ಕೊಡುತ್ತೇನೆ., ನನ್ನೊಂದಿಗೆ ಮಲಗಲು ಬರುತ್ತೀಯಾ ಎಂದು ಕೇಳುತ್ತಿದ್ದು, ಅ.3 ರಂದು ಸಂಜೆ ಮಹಿಳೆ ಮನೆಯಂಗಳದಲ್ಲಿದ್ದಾಗ ರಘುನಾಥ್ ರೈ ಬಂದು ಹಣ ಕೊಡುತ್ತೇನೆ., ಮಲಗಲು ಬರುತ್ತೀಯಾ ಎಂದು ಕೇಳಿದ್ದು, ಭಯಗೊಂಡ ಮಹಿಳೆ ಓಡಿ ಹೋಗಿ ಮನೆಯ ಬಾಗಿಲು ಹಾಕಿದ್ದು, ಬಳಿಕ ಮಕ್ಕಳ ಬಳಿ ವಿಚಾರ ತಿಳಿಸಿದ್ದು, ಮರ್ಯಾದೆಗೆ ಅಂಜಿ ಸಂಬಂಧಿಕರೊಂದಿಗೆ ಚರ್ಚಿಸಿ ತಡವಾಗಿ ದೂರು ನೀಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ BNS 2023 (U/s-75,75(1)(¡¡)) ರಂತೆ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!