May 5, 2026

ಮಂಗಳೂರು: ಅಪಘಾತದ ಗಾಯಾಳನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಲೇಡಿ ಪೊಲೀಸ್

0
image_editor_output_image1880506177-1729687491201

ಮಂಗಳೂರು: ಅಪಘಾತದ ಗಾಯಾಳನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಲೇಡಿ ಪೊಲೀಸ್

ಮಂಗಳೂರು: ಪಿಕಪ್ ಹಾಗೂ ಕಂಟೈನರ್ ಲಾರಿ ನಡುವೆ ನಡೆದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ ಗಾಯಾಳನ್ನು ತಮ್ಮದೇ ಸ್ಕೂಟಿಯಲ್ಲಿ ಆಸ್ಪತ್ರೆಗೆ ದಾಖಲಿಸುವ ಮೂಲಕ ಕದ್ರಿ ಪೊಲೀಸ್ ಠಾಣೆ ಮಹಿಳಾ ಸಿಬ್ಬಂದಿ ಮನ್ ಶಿದಬಾನು ಮಾನವೀಯತೆ ಮೆರೆದಿದ್ದಾರೆ.

ಇಂದು (ಅ.23) ಮುಂಜಾನೆ ಕೆಪಿಟಿ ಬಳಿ ಪಿಕಪ್ ಮತ್ತು ಕಂಟೈನರ್ ಲಾರಿ ಮಧ್ಯೆ ಅಪಘಾತ ಉಂಟಾಗಿತ್ತು. ಈ ವೇಳೆ ತೀವ್ರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಕ್ಲೀನರ್ ನನ್ನು ಅದೇ ದಾರಿಯಲ್ಲಿ ಬಂದ ಕದ್ರಿ ಪೊಲೀಸ್ ಠಾಣೆಯ ಮಹಿಳಾ ಸಿಬ್ಬಂದಿ ಮನ್ ಶಿದಬಾನು ಕೂಡಲೇ ತಮ್ಮ ಸ್ಕೂಟಿಯಲ್ಲಿ ಎಜೆ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಅಪಘಾತ ಸಂದರ್ಭದಲ್ಲಿ ಸಹಾಯಕ್ಕೆ ಬರದೆ ಮುಂದೆ ಹೋಗುವ ಜನರಲ್ಲಿ ಮಹಿಳೆಯಾಗಿ ತಮ್ಮ ಸ್ಕೂಟಿಯಲ್ಲಿ ಗಾಯಾಳುವನ್ನು ಕೂರಿಸಿಕೊಂಡು ಹೋಗಿ ಆಸ್ಪತ್ರೆಗೆ ಮನ್ ಶಿದಬಾನು ಅವರು ದಾಖಲಿಸಿದ್ದಾರೆ. ಮನ್ ಶಿದಬಾನು ಕರ್ತವ್ಯ ಜೊತೆ ಸಮಯ ಪ್ರಜ್ಞೆ ಮೆರೆದಿರುವುದು ಸ್ಪಷ್ಟನೆಯಾಗಿದೆ.

Leave a Reply

Your email address will not be published. Required fields are marked *

error: Content is protected !!