March 18, 2026

ಗ್ಯಾಂಗ್‌ಸ್ಟರ್ ಛೋಟಾ ರಾಜನ್‌ಗೆ ಜಾಮೀನು: ಜಾಮೀನು ದೊರೆತರೂ  ಛೋಟಾ ರಾಜನ್ ಜೈಲಿನಿಂದ ಹೊರ ಬರಲು ಸಾಧ್ಯವಿಲ್ಲ ಏಕೆ?

0
image_editor_output_image-600792083-1729687162766

ಮುಂಬೈ: ಹೋಟೆಲ್ ಉದ್ಯಮಿ ಜಯ್‌ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಗ್ಯಾಂಗ್‌ಸ್ಟರ್ ಛೋಟಾ ರಾಜನ್‌ಗೆ ಜಾಮೀನು ಮಂಜೂರು ಮಾಡಲಾಗಿದೆ.

2001ರಲ್ಲಿ ಉದ್ಯಮಿ ಜಯ್‌ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲವು ಕಳೆದ ಮೇ 30ರಂದು ಛೋಟಾ ರಾಜನ್‌ಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ಛೋಟಾ ರಾಜನ್ ಬಾಂಬೆ ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದರು. ಜಾಮೀನು ಮಂಜೂರು ಮಾಡಿ ಅಧೀನ ನ್ಯಾಯಾಲಯದ ಶಿಕ್ಷೆಯನ್ನು ರದ್ದುಪಡಿಸುವಂತೆ ಛೋಟಾ ರಾಜನ್ ಅರ್ಜಿ ಸಲ್ಲಿಸಿದ್ದ.

ಇದೀಗ ಛೋಟಾ ರಾಜನ್‌ಗೆ ಬಾಂಬೆ ಹೈಕೋರ್ಟ್​ನ ವಿಭಾಗೀಯ ಪೀಠವು ಜಾಮೀನು ಮಂಜೂರು ಮಾಡಿದೆ. ಜಾಮೀನಿಗಾಗಿ 1 ಲಕ್ಷ ರೂ. ಭದ್ರತಾ ಬಾಂಡ್ ನೀಡಲು ಆದೇಶಿಸಿದೆ. ಆದರೆ ಛೋಟಾ ರಾಜನ್ ಜೈಲಿನಿಂದ ಹೊರ ಬರಲು ಸಾಧ್ಯವಿಲ್ಲ. ಏಕೆಂದರೆ ಚೋಟಾ ರಾಜನ್ ಉಳಿದ ಪ್ರಕರಣಗಳಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾನೆ.

Leave a Reply

Your email address will not be published. Required fields are marked *

You may have missed

error: Content is protected !!