November 22, 2024

ತುಳು ಭಾಷೆಯನ್ನು ಕರ್ನಾಟಕದ ಎರಡನೇ ಅಧಿಕೃತ ಭಾಷೆಯನ್ನಾಗಿಸುವಲ್ಲಿ ನಿರಂತರ ಹೋರಾಟಗೋವಾ ತುಳು ಕೂಟ ಉದ್ಘಾಟಿಸಿ ಶಾಸಕ ಅಶೋಕ್ ರೈ

0

ಪುತ್ತೂರು: ತುಳು ಕರಾವಳಿಗರ ಮಾತೃಭಾಷೆ, ತುಳುವಿಗೆ ಅದರದೇ ಆದ ಇತಿಹಾಸವಿದೆ, ತುಳು ಭಾಷೆಯನ್ನು ಕರ್ನಾಟಕದ ಎರಡನೇ ಹೆಚ್ಚುವರಿ‌ಭಾಷೆಯನ್ನಾಗಿಸುವಲ್ಲಿ‌ನಿರಂತರ ಹೋರಾಟ ಅಗತ್ಯವಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು

.
ಅವರು ಅ. 20 ರಂದು ತುಳು ಕೂಟ ಗೋವಾ ಇದರ ವತಿಯಿಂದ ಉತ್ತರ ಗೋವಾದ ಪೋವರಿಂ ಪುಂಡಲೀಕ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಗೋವಾ ತುಳುಕೂಟವನ್ನು ಉದ್ಘಾಟಿಸಿ ಮಾತನಾಡಿದರು.


ತುಳು ಭಾಷಿಗರು ,ತುಳು ಮಾತನಾಡುವವರು ವಿಶ್ವದ ಎಲ್ಲೆಡೆ ಇದ್ದಾರೆ.‌ನಮ್ಮ ದೇಶದ ಪ್ರತೀಯೊಂದು ರಾಜ್ಯದಲ್ಲೂ ತುಳುವರು ವ್ಯಾಪಾರ,ವಹಿವಾಟು ನಡೆಸುತ್ತಿದ್ದಾರೆ ಇದು ಹೆಮ್ಮೆಯ ಸಂಗತಿಯಾಗಿದೆ. ನಮ್ಮ ತುಳು ಭಾಷೆಯನ್ನು ಉಳಿಸಬೇಕಾದರೆ ಎಲ್ಲರ ಸಹಕಾರ ಅಗತ್ಯವಾಗಿದೆ. ತುಳಿಗೆ ಎರಡನೇ ಭಾಷೆಯ ಪ್ರಾಧಾನ್ಯತೆ ನೀಡಬೇಕೆಂದು ನಾನು ವಿಧಾನಸಭಾ ಅಧಿವೇಶನದಲ್ಲಿಯೂ ಸರಕಾರದ ಗಮನ ಸೆಳೆದಿದ್ದೆ. ಇತರೆ ರಾಜ್ಯಗಳಲ್ಲಿ ಅಲ್ಲಿನ ಸ್ಥಳೀಯ ಭಾಷೆಗೆ ಹೇಗೆ ಮಾನ್ಯತೆ ನೀಡಿದ್ದಾರೆ ಎಂಬುದನ್ನು ಅಧ್ಯಯನ ನಡೆಸಿ ಆ ವರದಿಯನ್ನು ಸರಕಾರದ ಮುಂದೆ ಇಟ್ಟಿದ್ದೇನೆ. ತುಳು ಭಾಷೆಯನ್ನು ಉಳಿಸುವ ನಿಟ್ಟಿನಲ್ಲಿ ನನ್ನ ಪ್ರಯತ್ನ ನಿರಂತರ ಸಾಗಲಿದೆ ಎಂದು ಹೇಳಿದರು. ಗೋವಾ ತುಳುಕೂಟ ನಿರಂತರ ಕಾರ್ಯಕ್ರಮವನ್ನು ಆಯೋಜನೆ ಮಾಡುವ ಮೂಲಕ ಗೋವಾದಲ್ಲಿ ತುಳುವಿನ ಕಂಪನ್ನು ಹೆಚ್ಚಿಸುವಂತಾಗಲಿ ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ಶಾಸಕ ಸುನಿಲ್ ಕುಮಾರ್, ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಶಶಿಧರ್ ಶೆಟ್ಟಿ ಬರೋಡಾ, ಡಾ ಅರುಣ್ ಉಳ್ಳಾಲ್, ಗೋವಾ ಪೋವರಿಂ ಶಾಸಕರೋಹನ್ ಅಶೋಕ್ ಕಂಠ, ದ ಕ ಜಿಲ್ಲಾ ಕಂಬಳ ಅಕಾಡೆಮಿ ಕಾರ್ಯದರ್ಶಿ ಗೋಪಾಲ ಕದಂಬ,ತುಳು ಸಿನಿಮಾ ನಿರ್ದೇಶಕವಿಜಯಕುಮಾರ್ ಕೋಡಿಯಾಲ್ ಬೈಲ್, ಉದ್ಯಮಿ ಸುದಾಕರ ಶೆಟ್ಟಿ ನೆಲ್ಲಿಕಟ್ಡೆ,ತುಳು ನಡಪ್ರಸನ್ನ ಶೆಟ್ಟಿ ಬಲ್ಲೂರು,ಮೂಡಬಿದ್ರೆ ತುಳುಕೂಟದ ಅಧ್ಯಕ್ಷ ಧನಕೀರ್ತಿ ಬಲಿಪ,ಗೋವಾ ತುಳು ಕೂಟ ಅಧ್ಯಕ್ಷ ಸದಾನಂದ ಶೆಟ್ಟಿ ಬೆಳುವಾಯಿ,ಚಂದ್ರಹಾಸ ಅಮೀನ್, ವಿಜಯೇಂದ್ರ ಶೆಟ್ಟಿ,ಶಶಿಧರ್ ನಾಯ್ಕ್,ಪ್ರಶಾಂತ್ ಜೈನ್, ಅಶೋಕ ಶೆಟ್ಟಿ ಮುಡೂರು ಉಪಸ್ಥಿತರಿದ್ದರು.

ನಿತೇಶ್ ಶೆಟ್ಟಿ ಎಕ್ಕಾರ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ‌ಬಳಿಕ ಶಿವಧೂತೆ ಗುಳಿಗ ಯಕ್ಷಗಾನ ಪ್ರದರ್ಶನ ನಡೆಯಿತು

Leave a Reply

Your email address will not be published. Required fields are marked *

error: Content is protected !!