ಮಂಗಳೂರು: ಹೊಸಬೆಟ್ಟು ಬೀಚ್ ರಸ್ತೆಯಲ್ಲಿ ಗಾಂಜಾ ಮಾರಾಟ: 1.5 ಕೆಜಿ ಗಾಂಜಾ ಸಹಿತ ಆರೋಪಿಯ ಬಂಧನ
ಮಂಗಳೂರು: ನಗರದ ಹೊಸಬೆಟ್ಟು ಬೀಚ್ ರಸ್ತೆಯಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಬಿಹಾರ ಮೂಲದ ಅಸಾಮಿಯನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯಿಂದ ಕೃತ್ಯಕ್ಕೆ ಉಪಯೋಗಿಸಿದ 30,000 ರೂ. ಮೌಲ್ಯದ ಸುಮಾರು 1.5 ಕೆಜಿ ಗಾಂಜಾ, 15,000 ರೂ. ಮೌಲ್ಯದ ಮೊಬೈಲ್ ಫೋನನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಬಿಹಾರ್ ರಾಜ್ಯದ ನಿವಾಸಿ ಸೋನಿ ಕುಮಾರ್(27) ಬಂಧಿತ ಆರೋಪಿ. ಸುರತ್ಕಲ್ ಠಾಣಾ ಪೊಲೀಸರು ಹೊಸಬೆಟ್ಟು ಬಳಿ ಬೀಚ್ ರಸ್ತೆಯಲ್ಲಿ ಗಸ್ತು ತಿರುಗಾಡುತ್ತಿದ್ದರು.
ಈ ವೇಳೆ ಹೆಗಲಿನಲ್ಲಿ ಬ್ಯಾಗ್ ಹಾಕಿಕೊಂಡು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವಕನೋರ್ವನು ಪೊಲಿಸ್ ಜೀಪ್ ಅನ್ನು ಕಂಡ ತಕ್ಷಣ ಓಡಲು ಯತ್ನಿಸಿದ್ದಾನೆ. ಆತನನ್ನು ಪೊಲೀಸರು ಹಿಡಿದು ವಿಚಾರಿಸಿದರೆ, ಆತನು ಹಿಂದಿ ಭಾಷೆಯಲ್ಲಿ ಮಾತನಾಡಿದ್ದಾನೆ.