February 4, 2026

ಕಾರ್ಕಳ: ಪೆಟ್ರೋಲ್ ಪಂಪ್ ನಲ್ಲಿ ಟ್ಯಾಂಕ್ ಫುಲ್ ಪೆಟ್ರೋಲ್ ತುಂಬಿಸಿ ಪರಾರಿ: ಸಿಸಿ ಕ್ಯಾಮಾರದಲ್ಲಿ ಸೆರೆ

0
image_editor_output_image1798263488-1728805039498

ಕಾರ್ಕಳ:  ತಾಲೂಕು ಕಚೇರಿ ಜಂಕ್ಷನ್ ಬಳಿಯ ಅನು ಫಿಲ್ ಎಂಆರ್‌ಪಿಎಲ್ ಪೆಟ್ರೋಲ್ ಬಂಕ್ ನಲ್ಲಿ ಕಾರಿಗೆ ಟ್ಯಾಂಕ್ ತುಂಬ ಪೆಟ್ರೋಲ್ ತುಂಬಿಸಿ ನಗದು ಪಾವತಿಸದೇ ವಂಚಿಸಿ ಪರಾರಿಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಪತ್ತೆ ಹಚ್ಚುವಲ್ಲಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ಆಗಸ್ಟ್ 29 ರಂದು ಬೆಳಗಿನ ಜಾವ 2.50 ಗಂಟೆಗೆ ಈ ಘಟನೆ ನಡೆದಿತ್ತು. ಆರೋಪಿಯು ಕೆವಿ 20 ಎಮ್ ಇ 8212 ನೇ ನಂಬರ್‌ನ ಮಹೇಂದ್ರ XUV 300 ನೇ ಕಾರಿಗೆ ಪೆಟ್ರೋಲ್ ಹಾಕಿಸಿಕೊಳ್ಳಲು ಬಂದಿದ್ದರು. ಅದರಂತೆ ಆರೋಪಿಯು 4253.88  ರೂಪಾಯಿ ಪೆಟ್ರೋಲ್ ಹಾಕಿಸಿಕೊಂಡಿದ್ದಾನೆ. ಬಂಕ್‌ನ ಸಿಬ್ಬಂದಿ ಆಕಾಶ್ ಅವರಲ್ಲಿ ಯುಪಿಐ ಸ್ಕ್ಯಾನರ್ ತರುವಂತೆ ಹೇಳಿದ್ದು ಅದರಂತೆ ಯುಪಿಐ ಸ್ಕ್ಯಾನರ್ ಅನ್ನು ತರಲು ಹೋದಾಗ ಆರೋಪಿ ಕಾರನ್ನು ಚಲಾಯಿಸಿಕೊಂಡು ಹೋಗಿದ್ದನು. ಪೆಟ್ರೋಲ್ ಹಾಕಿದ 4253.88 ರೂಪಾಯಿ ಹಣವನ್ನು ನೀಡದೇ ಮೋಸ ಮಾಡಿದ್ದನು.

ಸಿಸಿ ಕ್ಯಾಮೆರಾದಿಂದ ಮಾಹಿತಿ:
ಆರೋಪಿ ಚಲಾಯಿಸಿದ ಕಾರು ಪೆಟ್ರೋಲ್ ಬಂಕ್ ಎದುರುಗಡೆಯ ರಸ್ತೆಯಾಗಿ ಸ್ವಲ್ಪ ಮುಂದಕ್ಕೆ ಹೋಗಿದ್ದು, ಕೆಲವೇ ಕ್ಷಣದಲ್ಲಿ ಮತ್ತೇ ಹಿಂತಿರುಗಿದೆ. ಆ ವೇಳೆಗೆ ನಾಯಿಗಳು ಕಾರನ್ನು ಹಿಂಮ್ಮೆಟ್ಟಿಸಲು ಮುಂದಾಗಿ ಬೊಗಳಿರುವ ದೃಶ್ಯಾವಳಿ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ. ಜೊತೆಗೆ ಪೆಟ್ರೋಲ್ ಹಾಕಿ ಹಣ ಪಾವತಿಸದೇ ಕುಕ್ಕುಂದೂರು ಗಣಿತ ನಗರದ ಮೂಲಕವಾಗಿ ಹಿರಿಯಡ್ಕ ಮಾರ್ಗವಾಗಿ ಹಾದು ಹೋದ ಕಾರಿನ ಕುರಿತು ಎರಡು ಕಡೆಗಳಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾದಲ್ಲೂ ಸೆರೆಯಾಗಿತ್ತು.

ಕಾರು ಹೊರಟು ಹೋದ ವೇಳೆ ಹಾಗೂ ಗಣಿತ ನಗರ ಮತ್ತು ಹಿರಿಯಡ್ಕ ಮಾರ್ಗವಾಗಿ ಹಾದೂ ಹೋದ ವಾಹನಗಳ ವಿವರ ಪಡೆದ ಪೊಲೀಸರು ಆರೋಪಿ ಚಲಾಯಿಸಿ ವಾಹನ ಪತ್ತೆ ಹಚ್ಚಲು ಸಹಕಾರಿಯಾಗಿತ್ತು. ಬಂಟಕಲ್ಲು ವ್ಯಕ್ತಿಗೆ ಅಧೀನದಲ್ಲಿ ಇರುವ ವಾಹನವೆಂಬ ಮಾಹಿತಿ ಲಭಿಸಿದೆ.

Leave a Reply

Your email address will not be published. Required fields are marked *

error: Content is protected !!