ಬಸ್ ಢಿಕ್ಕಿ: ಸ್ಕೂಟರ್ ನ ಹಿಂಬದಿಯಲ್ಲಿದ್ದ ಮಹಿಳೆ ಮೃತ್ಯು
ಬೆಂಗಳೂರು: ಬಿಎಂಟಿಸಿಗೆ ಮಹಿಳೆಯೊಬ್ಬರು ಬಲಿಯಾಗಿದ್ದಾರೆ. ಸ್ಕೂಟರ್‌ನಲ್ಲಿ ಬರುತ್ತಿದ್ದಾಗ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದ ಬೆಂಗಳೂರಿನ ಉಲ್ಲಾಳ ಉಪನಗರ ಕೆರೆ ಬಳಿ ನಡೆದಿದೆ.
ಉಲ್ಲಾಳ ಮುಖ್ಯರಸ್ತೆ 100 ಫೀಟ್ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ. ಮೋನಿಕಾ ಮೃತ ದುರ್ದೈವಿ.
ಸೊನ್ನೆನಾಹಳ್ಳಿಯ ಮಾರುತಿ ನಗರದ ನಿವಾಸಿಯಾಗಿದ್ದ ಮೋನಿಕಾ, ರಿಂಗ್ ರೋಡ್‌ನಲ್ಲಿರುವ ಷೋ ರೂಂನಲ್ಲಿ ಹೆಚ್ಆರ್ ಆಗಿ ಕೆಲಸ ಮಾಡುತ್ತಿದ್ದರು. ತಮ್ಮ ಜ್ಯೂಪಿಟರ್ ಸ್ಕೂಟರ್‌ನಲ್ಲಿ ಬರುತ್ತಿದ್ದರು. 100 ಫೀಟ್ ರಸ್ತೆ ಕಾಮಗಾರಿ ನಡೆಯುತ್ತಿದ್ದ ಕಾರಣ ಒಂದು ಬದಿಯ ರಸ್ತೆ ಕ್ಲೋಸ್ ಆಗಿತ್ತು. ಕೇವಲ ಒಂದೇ ಬದಿಯ ರಸ್ತೆಯಲ್ಲಿ ವಾಹನಗಳ ಓಡಾಟಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ಈ ವೇಳೆ ಸ್ಕೂಟರ್‌ನಲ್ಲಿ ಬರುತ್ತಿದ್ದ ಮೋನಿಕಾಗೆ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದಿದೆ. ರಸ್ತೆಗೆ ಬಿದ್ದಿದ್ದ ಮೋನಿಕಾ ತಲೆ ಮೇಲೆ ಹಿಂಬದಿಯಿಂದ ಬರುತ್ತಿದ್ದ ಕಾರಿನ ಚಕ್ರ ಹತ್ತಿದೆ. ಪರಿಣಾಮ ಮೋನಿಕಾ ತಲೆ ಛಿದ್ರಗೊಂಡಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ.





