ವಿಟ್ಲ: ತೀವ್ರ ಜ್ವರದಿಂದ ಮಂಗಿಲಪದವು ಯುವಕ ಮೃತ್ಯು
ವಿಟ್ಲ: ಸಮೀಪದ ಮಂಗಿಲಪದವು ಬನಾರಿ ನಿವಾಸಿ ಅಬುಬಕ್ಕರ್ ಸಿದ್ದೀಕ್ (30) ಎಂಬವರು ಶನಿವಾರ ನಿಧನರಾದರು.
ವಿಟ್ಲ ಕೇಂದ್ರ ಜುಮಾ ಮಸೀದಿಯ ಜಮಾಅತ್ ಗೆ ಒಳಪಟ್ಟ ಮೂಲತಃ ವಿಟ್ಲ ಸಮೀಪದ ಮೇಗಿನಪೇಟೆ ಕಾಟ್ರಸ್ ನಿವಾಸಿಯಾಗಿರುವ ಇವರು, ಪ್ರಸ್ತುತ ವಿಟ್ಲ ಸಮೀಪದ ಮಂಗಿಲಪದವು ಬಾಬಟ್ಟ ಬನಾರಿ ನಿವಾಸಿಯಾಗಿದ್ದಾರೆ.
ಮಂಗಿಲಪದವು ಬಾಬಟ ಬನಾರಿ ನಿವಾಸಿ ಅದ್ಲಚ್ಚ ಎಂಬವರ ಪುತ್ರ ಅಬುಬಕ್ಕರ್ ಸಿದ್ದೀಕ್ ಅವರು ಎರಡು, ಮೂರು ದಿನಗಳ ವಿಪರೀತ ಜ್ವರ ದಿಂದಾಗಿ ಇದೀಗ ಮಂಗಳೂರಿನ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ನಿಧನರಾದರು.





