March 22, 2026

ಪಿಜಿ ಕಟ್ಟಡದ 5ನೇ ಪ್ಲೋರ್ನಿಂದ ಹಾರಿ ಸಾಫ್ಟ್ ವೇರ್ ಇಂಜಿನಿಯರ್ ಆತ್ಮಹತ್ಯೆ

0
image_editor_output_image-149739523-1728106507152.jpg

ಬೆಂಗಳೂರು: 5ನೇ ಮಹಡಿಯಿಂದ ಹಾರಿ ಪಿಜಿ ಸ್ಟೂಡೆಂಟ್ ಆತ್ಮಹತ್ಯೆ ಮಾಡಿದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನ ವೈಟ್ ಫೀಲ್ಡ್‌ನ ಪ್ರಶಾಂತ್ ಲೇಔಟ್‌ನಲ್ಲಿ ನಡೆದಿದೆ.

ಮೃತ ಯುವತಿಯನ್ನು ಆಂಧ್ರಪ್ರದೇಶ ಕಡಪ ಮೂಲದ ಗೌತಮಿ ಎಂದು ಎಂದು ಗುರುತಿಸಲಾಗಿದೆ.

ಬೆಂಗಳೂರಲ್ಲಿ ನೆಲೆಸಿದ್ದ ಯುವತಿ ಟಿಸಿಎಸ್ ನಲ್ಲಿ ಕೆಲಸ ಮಾಡುತ್ತಿದ್ದಳು. ಪಿಜಿಯ ಐದನೇ ಮಹಡಿಯಿಂದ ಸಾವನ್ನಪ್ಪಿರುವ ಯುವತಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿದೆ.

ಈ ಸಾವಿನ ತನಿಖೆ ನಡೆಸಿರುವ ವೈಟ್‌ಫೀಲ್ಡ್‌ ಠಾಣೆಯ ಪೊಲೀಸರಿಗೆ ಡೆತ್‌ನೋಟ್ ಕೂಡ ದೊರಕಿದೆ.

ಸಾವಿಗೂ ಮುನ್ನ ಡೆತ್‌ನೋಟ್ ಬರೆದಿರುವ ಗೌತಮಿ, ನನ್ನ ಮೃತದೇಹವನ್ನು ಪೋಸ್ಟ್‌ ಮಾರ್ಟಂ ಮಾಡಬೇಡಿ. ಯಾವುದೇ ರೀತಿಯ ತನಿಖೆ ಸಹ ನಡೆಸಬೇಡಿ. Sorry. ನನ್ನ ಪೋಷಕರಿಗೆ‌ ನನ್ನ ಮೃತದೇಹ ನೀಡಿ ಎಂದು ಡೆತ್‌ ನೋಟ್‌ನಲ್ಲಿ ಬರೆದಿದ್ದಾರೆ ಎನ್ನಲಾಗಿದೆ. ವೈಟ್‌ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!