November 21, 2024

ಕಕ್ಕಿಂಜೆ: ಹಿದಾಯ ಫೌಂಡೇಶನ್ ವತಿಯಿಂದ ವೈದ್ಯಕೀಯ ತಪಾಸಣಾ ಶಿಬಿರ: ಶಿಬಿರದಲ್ಲಿ ಒಟ್ಟು 517 ಫಲಾನುಭವಿಗಳು ಭಾಗಿ-400 ಮಂದಿಗೆ ಉಚಿತ ಔಷಧಿ ವಿತರಣೆ

0

ಬಂಟ್ವಾಳ: ಹಿದಾಯ ಫೌಂಡೇಶನ್ ಮಂಗಳೂರು, ಮುಹಿಯುದ್ದೀನ್ ಜುಮಾ ಮಸ್ಜಿದ್, ಎಸ್.ಕೆ.ಎಸ್.ಎಸ್.ಎಫ್ ಕಕ್ಕಿಂಜೆ, ಯೇನೆಪೋಯ ಮೆಡಿಕಲ್ ಕಾಲೇಜ್ ಆಸ್ಪತ್ರೆ ದೇರಳಕಟ್ಟೆ ಇದರ ಸಂಯುಕ್ತ ಆಶ್ರಯದಲ್ಲಿ ವೈದ್ಯಕೀಯ ತಪಾಸಣಾ ಶಿಬಿರ ಹಾಗೂ ಆರೋಗ್ಯ ಜಾಗೃತಿ ಕಾರ್ಯಕ್ರಮ ಸೆ. 29 ರಂದು ನೂರುಲ್ ಇಸ್ಲಾಂ ಮದರಸ ಕಕ್ಕಿಂಜೆಯಲ್ಲಿ ನಡೆಯಿತು.

ಹಿದಾಯ ಫೌಂಡೇಶನ್ ಅಧ್ಯಕ್ಷ ಮೊಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು ಅಧ್ಯಕ್ಷತೆ ವಹಿಸಿದರು. ಅಬೂಬಕರ್ ಸಿದ್ದೀಕ್ ಅಹ್ಮದ್ ಅಲ್ ಜಲಾಲಿ ದುವಾ ನೆರವೇರಿಸಿದರು.

ಈ ಶಿಬಿರದಲ್ಲಿ 517 ಫಲಾನುಭವಿಗಳು ಸದುಪಯೋಗ ಪಡೆದುಕೊಂಡರು. ಆರೋಗ್ಯ ಸಮಸ್ಯೆ ಇರುವ ಸುಮಾರು
400 ಜನರಿಗೆ ಉಚಿತ ಔಷಧಿ ವಿತರಣೆ ಮಾಡಲಾಯಿತು.

‌ಮುಖ್ಯ ಅತಿಥಿಗಳಾಗಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಾರ್ಮಾಡಿ ಹಸನಬ್ಬ, ಹಿದಾಯ ಫೌಂಡೇಶನ್ ಆಡಳಿತಾಧಿಕಾರಿ ಆಬಿದ್ ಅಸ್ಗರ್, ಯೇನೆಪೋಯ ಮೆಡಿಕಲ್ ಕಾಲೇಜ್ ಅಸೋಸಿಯೇಟ್ ಪ್ರೊಫೆಸರ್ ಅಶ್ವಿನಿ ಶೆಟ್ಟಿ, ಎಂ.ಜೆ.ಎಂ ಸೇವಾ ಸಮಿತಿ ಅಧ್ಯಕ್ಷ ಅರೆಕ್ಕಲ್ ಇಬ್ರಾಹಿಂ, ಎಂ‌ಜೆಎಂ ಜಲಾಲಿಯಾ ನಗರ ಅಧ್ಯಕ್ಷ ಸಿದ್ದೀಕ್, ಎಂಜೆ.ಎಂ ಇಸ್ಲಾಮಾಬಾದ್ ಅಧ್ಯಕ್ಷ ಸಿದ್ದೀಕ್ ಬ್ರೈಟ್, ಬಿಜೆಎಂ ಅಧ್ಯಕ್ಷ ಮೂಸಾ ಕುಂಞಿ ಬಲಿಪಾಯ, ಎಸ್‌.ಕೆ.ಎಸ್‌.ಎಫ್ ಅಧ್ಯಕ್ಷ ಶರೀಫ್ ಹೆಚ್.ಎ. ಭಾಗವಹಿಸಿದ್ದರು.

ಈ ಶಿಬಿರದಲ್ಲಿ ಹಿದಾಯ ಫೌಂಡೇಶನ್ ನ  ಬಷೀರ್ ಟಿ.ಕೆ, ಇಕ್ಬಾಲ್ ಫರಂಗಿಪೇಟೆ, ಹಕೀಮ್ ಕಲಾಯಿ, ಬಿ.ಎಂ ತುಂಬೆ, ಬಷೀರ್ ವಗ್ಗ, ಸಾದಿಕ್ ಹಸ್ಸನ್, ಹಮೀದ್ ಗೊಳ್ತಮಜಲು, ರಶೀದ್ ಕಕ್ಕಿಂಜೆ,
ಇಲಿಯಾಸ್ ಕಕ್ಕಿಂಜೆ, ಸಿಬ್ಬಂದಿಗಳಾದ ವಾಸಿಫ್ ಅಲಿ,
ಝಹೀರ್, ಇಬ್ರಾಹಿಂ ಇರ್ಫಾನ್ ಮತ್ತು ವಿಮೆನ್ಸ್ ವಿಂಗ್ ಸದಸ್ಯರು ಭಾಗವಹಿಸಿದರು.

Leave a Reply

Your email address will not be published. Required fields are marked *

error: Content is protected !!