“ಹಿಂದೂ ಧರ್ಮ” ಹಿಂದೂಗಳ ಧರ್ಮ ಅಲ್ಲ: ಸಾಹಿತಿ ಕೆ.ಎಸ್.ಭಗವಾನ್
ಮೈಸೂರು: ದೇವಸ್ಥಾನಗಳನ್ನು ಕಟ್ಟುವುದು ಶೂದ್ರರು. ಆದರೆ ದೇವಸ್ಥಾನದ ಒಳಗೆ ಇರೋರು ಬ್ರಾಹ್ಮಣರು. ಹೀಗಾಗಿ ಮಾನ ಮಾರ್ಯಾದೆ ಇದ್ದರೆ ಶೂದ್ರರು ದೇವಸ್ಥಾನಗಳಿಗೆ ಹೋಗುವುದನ್ನು ನಿಲ್ಲಿಸಬೇಕು ಎಂದು ಸಾಹಿತಿ, ಚಿಂತಕ ಪ್ರೊ.ಕೆ ಎಸ್.ಭಗವಾನ್ ನೀಡಿದ್ದಾರೆ.
ಮೈಸೂರಿನಲ್ಲಿ ನಡೆದ ಮಹಿಷ ದಸರಾದಲ್ಲಿ ಮಾತನಾಡಿದ ಅವರು, ಹಿಂದೂ ಧರ್ಮ ಅಂದರೆ ಅದು ಹಿಂದೂಗಳ ಧರ್ಮ ಅಲ್ಲ. ಅದು ಬ್ರಾಹ್ಮಣರ ಧರ್ಮ. ಹಿಂದೂ ಎಂದರೆ ಹಿಂದಕ್ಕೆ ಹೋಗುವ ಜನ. ಜ್ಞಾನದ ಹಸಿವು ಇಲ್ಲದ ಕಾರಣ ಹಲವರು ಗುಲಾಮರಾಗಿದ್ದಾರೆ. ಗಂಡಸರನ್ನು ಮಾತ್ರ ಬ್ರಾಹ್ಮಣರು ಅಂತಾರೆ. ಹೆಂಗಸರನ್ನು ಬ್ರಾಹ್ಮಣರು ಅನ್ನುವುದಿಲ್ಲ ಅವರನ್ನು ಶೂದ್ರರು ಅಂತಾರೆ ಎಂದು ಕೆಎಸ್ ಭಗವಾನ್ ಹೇಳಿದ್ದಾರೆ.
ದೇವಸ್ಥಾನ ಕಟ್ಟಿದ ಶೂದ್ರರನ್ನೇ ದೇವಸ್ಥಾನದೊಳಗೆ ಬಿಟ್ಟುಕೊಳ್ಳುವುದಿಲ್ಲ. ಶೂದ್ರರು ದೇವಸ್ಥಾನಗಳಿಗೆ ಹೋಗೋದನ್ನು ನಿಲ್ಲಸಬೇಕು. 50 ವರ್ಷ ಆಯ್ತು ನಾನು ದೇವಸ್ಥಾನಕ್ಕೆ ಹೋಗಿ. ದೇವಸ್ಥಾಕ್ಕೆ ಹೋದರೆ ಏನು ಆಗಲ್ಲ. ನೀವು ಹುಂಡಿಗೆ ದುಡ್ಡು ಹಾಕ್ತೀರಾ, ತೆಂಗಿನಕಾಯಿ ಹೊಡೆದು ಅರ್ಧ ಕಾಯಿ ಇಟ್ಟುಕೊಂಡು ಇನ್ನರ್ಧ ಕೊಡ್ತಾರೆ ಅಷ್ಟೇ. ಶೂದ್ರರಿಗೆ ಮಾನ ಮರ್ಯಾದೆ ಇದ್ದರೆ ದೇವಸ್ಥಾನಕ್ಕೆ ಹೋಗಬಾರದು. ನಾವು ಶೂದ್ರರು ಎಂದು ಒಪ್ಪಿಕೊಳ್ಳಬೇಕಾ ಎಂದು ಪ್ರಶ್ನಿಸಿದರು.