ಬಾಡಿಗೆ ಮನೆಯಲ್ಲಿದ್ದ ತಂದೆ, 4 ಹೆಣ್ಣು ಮಕ್ಕಳ ಮೃತದೇಹ ಪತ್ತೆ
ನವದೆಹಲಿ: ಮುಂಜಾನೆಯೇ ನವದೆಹಲಿಯಲ್ಲಿ ದುರ್ಘನೆಯೊಂದು ಸಂಭವಿಸಿದೆ. ಬಾಡಿಗೆ ಮನೆಯಲ್ಲಿದ್ದ ತಂದೆ ಹಾಗೂ ನಾಲ್ಕು ಹೆಣ್ಣು ಮಕ್ಕಳ ಶವ ಪತ್ತೆಯಾಗಿರುವ ಘಟನೆ ನಿನ್ನೆ (ಸೆ.27) ಬೆಳಕಿಗೆ ಬಂದಿದೆ.
ರಂಗಪುರಿ ಎಂಬ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದ್ದು, ತಂದೆ ಹೀರಾ ಲಾಲ್ (50) ಹಾಗೂ ಪುತ್ರಿಯರಾದ ನೀತು (18), ನಿಶಿ (15), ನೀರು (10), ನಿಧಿ (8) ಎಂಬುವುದಾಗಿ ಗುರುತಿಸಲಾಗಿದೆ.
ಕಾರ್ಪೆಂಡರ್ ವೃತ್ತಿ ಮಾಡುತ್ತಿದ್ದ ಹೀರಾ ಲಾಲ್ ಅವರ ಹೆಂಡತಿ ಕಳೆದ ಒಂದು ವರ್ಷದ ಹಿಂದೆ ಮರಣಹೊಂದಿದ್ದು, ಬಳಕ 4 ಹೆಣ್ಣು ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದರು. ನಾಲ್ವರೂ ಅಂಗವೈಕಲ್ಯದಿಂದ ಬಳಲುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.





